×
Ad

ಖಾಸಗಿ ಕೋಣೆಗೆ 'ಅಮ್ಮ' ಶಿಫ್ಟ್‌ ..!

Update: 2016-11-04 12:21 IST

ಚೆನ್ನೈ, ನ.4: ಇಲ್ಲಿನ ಅಪೋಲೊ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಮುಖ್ಯ ಮಂತ್ರಿ ಜೆ.ಜಯಲಲಿತಾ ಚೇತರಿಸಿಕೊಂಡಿದ್ದಾರೆ ಅವರನ್ನು ಶೀಘ್ರದಲ್ಲೇ ಖಾಸಗಿ ಕೋಣೆಗೆ ವರ್ಗಾಯಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
68ರ ಹರೆಯದ ಜಯಲಲಿತಾ ಅವರು ಶ್ವಾಸಕೋಶದ ಸೊಂಕಿನಿಂದ  ಚೇತರಿಸಿಕೊಂಡಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಜಯಲಲಿತಾ ಅವರು ಸೆಪ್ಟಂಬರ್‌ 22ರಂದು ಜ್ವರ ಮತ್ತು ಡಿಹೈಡ್ರೋಜನ್‌ ಸಮಸ್ಯೆಯಿಂದಾಗಿ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.
ಅಪೋಲೊ ಆಸ್ಪತ್ರೆಯಲ್ಲಿ ಅವರಿಗೆ ಬ್ರಿಟನ್‌ನ ವೈದ್ಯರಾದ ರಿಚರ್ಡ್‌ ಬಿಯ್ಲೆ , ಏಮ್ಸ್ ಮತ್ತು ಅಪೋಲೊ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.                                                                                                                                

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News