ಮೋದಿ ಸರಕಾರ ವಿರುದ್ಧ ಮತ್ತೊಮ್ಮೆ ಕೆಂಡಕಾರಿದ ಶತ್ರುಘ್ನ ಸಿನ್ಹಾ
ಹೊಸದಿಲ್ಲಿ,ನ. 5: ಭೋಪಾಲ ಸೆಂಟ್ರಲ್ ಜೈಲಿನಿಂದ ಪರಾರಿಯಾದ ಸಿಮಿಕಾರ್ಯಕರ್ತರನ್ನು ಎನ್‌ಕೌಂಟರ್‌ನಲ್ಲಿ ಸಾಯಿಸಿರುವುದು, ಮತ್ತು ಮಾಜಿಸೈನಿಕ ರಾಮಕಿಶನ್ ಗ್ರೆವಾಲ್‌ರ ಆತ್ಮಹತ್ಯೆ ವಿಷಯವನ್ನು ಪ್ರಸ್ತಾಪಿಸಿ ಬಿಜೆಪಿ ಸಂಸದ ಮತ್ತು ಸಿನೆಮಾ ನಟ ಶತ್ರುಘ್ನ ಸಿನ್ಹಾ ಕೇಂದ್ರ ಮತ್ತು ಮಧ್ಯಪ್ರದೇಶಗಳ ತನ್ನ ಸರಕಾರವನ್ನು ಟೀಕಿಸಿದ್ದಾರೆಂದು ವರದಿಯಾಗಿದೆ.
ವಿಪಕ್ಷವನ್ನು ವೈರಿಯೆಂದು ತಿಳಿಯಬೇಡಿ:
ಶತ್ರುಘ್ನ ಸಿನ್ಹಾ,ಟ್ವೀಟ್ ಮಾಡಿ ಕೇಂದ್ರ ಸರಕಾರ ವಿಪಕ್ಷಗಳನ್ನು ತಮ್ಮ ವೈರಿಯೆಂದು ತಿಳಿಯಬಾರದು. ದಿಲ್ಲಿ ಮತ್ತು ಭೋಪಾಲದಲ್ಲಿನಡೆದಿರುವುದು ಅನುಚಿತ ಮತ್ತು ಅನಪೇಕ್ಷಣೀಯವಾದುದು ಆಗಿದೆ. ಕೆಲವು ದಿನಗಳಿಂದ ನಡೆಯುತ್ತಿರುವ ಘಟನೆಗಳಿಂದ ದೇಶವಿಡೀ ಕಂಪನವುಂಟಾಗಿದೆ ಎಂದು ತಿಳಿಸಿದ್ದಾರೆ.
ಭಯೋತ್ಪಾದಕರನ್ನು ಕಾನೂನು ಮೂಲಕ ನಿಗ್ರಹಿಸಲೇ ಬೇಕು:
ಭಯೋತ್ಪಾದಕರನ್ನು ನಿಗ್ರಹಿಸಲೇ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ ಆದರೆ ಅದು ಕಾನೂನಿನ ಮೂಲಕ ಆಕೆಲಸ ಆಗಬೇಕೆಂದು ಸಿನ್ಹಾ ಹೇಳಿದ್ದಾರೆ. ಭೋಪಾಲ ಜೈಲಿನ ಗಾರ್ಡ್ ರಮಾಶಂಕರ್ ಯಾದವ್‌ರ ಹತ್ಯೆಯನ್ನು ಪ್ರಸ್ತಾಪಿಸಿದ ಶತ್ರುಘ್ನ ಸಿನ್ಹಾ"ರಾಮಶಂಕರ್ ಯಾದವ್ ಮತ್ತು ಅವರ ಕುಟುಂಬಕ್ಕೆ ನನ್ನ ಸಂತಾಪವಿದೆ. ಅವರಿಗೆ ನಾನುಸಲಾಂ ಮತ್ತು ಶ್ರದ್ದಾಂಜಲಿ ಅರ್ಪಿಸುತ್ತೇನೆ. ಆವರ ಸಾವು ಹೇಗೆ ಆಯಿತು ಯಾಕಾಯಿತು ಎಂದುಕೂಡಾ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.
ಶಿವರಾಜ್‌ಸಿಂಗ್‌ರಿಗೆ ಸಲಹೆ:
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‌ರನ್ನು ಟ್ವೀಟ್‌ನಲ್ಲಿ ಉದ್ಧರಿಸಿದ ಸಿನ್ಹಾ"ಸನ್ಮಾನ್ಯ ಶಿವರಾಜ್ ಸಿಂಗ್ ಚೌಹಾನ್ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ. ಕಾನೂನು ವ್ಯವಸ್ಥೆ ರಾಜ್ಯಸರಕಾದ ವಿಷಯವಾಗಿದೆ. ಆದ್ದರಿಂದ ದಯವಿಟ್ಟು ಅದನ್ನು ಸರಿಯಾದ ರೀತಿ ನಿಭಾಯಿಸಿ ಎಂದು ಸಲಹೆ ನೀಡಿದ್ದಾರೆಂದು ವರದಿ ತಿಳಿಸಿದೆ.