ಭೋಪಾಲ್ ಎನ್‌ಕೌಂಟರ್ : ಚಪಾತಿ ಬಳಸಿ ಕೀ ತಯಾರಿಸಿದರು !
ಭೋಪಾಲ್ : ಭೋಪಾಲ್ ಕೇಂದ್ರ ಕಾರಾಗೃಹದಿಂದ ಇತ್ತೀಚೆಗೆಪರಾರಿಯಾಗಿ ನಂತರ ಪೊಲೀಸರ ಎನ್ಕೌಂಟರ್ ನಿಂದ ಮೃತಪಟ್ಟ ಎಂಟು ಮಂದಿಸಿಮಿ ಕಾರ್ಯಕರ್ತರು ಜೈಲಿನಿಂದ ತಪ್ಪಿಸಿಕೊಂಡ ಬಗೆಯಾದರೂ ಹೇಗೆ ಎಂದು ತಿಳಿದರೆ ಎಂಥವರಿಗೂ ಆಶ್ಚರ್ಯವಾಗದೇ ಇರದು. ಹಿಂದುಸ್ತಾನ್ ಟೈಮ್ಸ್ ವರದಿಯೊಂದರ ಪ್ರಕಾರ ಜೈಲಿನಲ್ಲಿ ಕೈದಿಗಳಿಗೆ ದಿನಾ ನೀಡಲಾಗುತ್ತಿದ್ದ ಚಪಾತಿಯನ್ನೇ ಉಪಯೋಗಿಸಿಈ ಚಾಣಾಕ್ಷರು ಹೇಗೆ ತಪ್ಪಿಸಿಕೊಂಡರೆಂದು ಊಹಿಸುವುದೂ ಅಸಾಧ್ಯವಾಗಿತ್ತು.
ಜೈಲಿನ ‘ಬಿ’ ಬ್ಲಾಕಿನಲ್ಲಿದ್ದ ಈ ಕೈದಿಗಳು ತಮಗೆ ಪ್ರತಿ ದಿನ ಮಧ್ಯಾಹ್ನ ಹಾಗೂ ರಾತ್ರಿ ನೀಡುತ್ತಿದ್ದ ಚಪಾತಿಯಲ್ಲಿ ಸ್ವಲ್ಪ ಭಾಗ ಉಳಿಸಿ ಅದನ್ನುಒಣಗಿಸಿ,ತಮ್ಮ ಸೆಲ್ ಗಳ ನಕಲಿ ಕೀ ತಯಾರಿಸಲುಟೂತ್ ಬ್ರಷ್ ಹ್ಯಾಂಡಲ್ ಉಪಯೋಗಿಸಿದ್ದರೆಂದು ಇದೀಗ ಮೂಲಗಳಿಂದ ತಿಳಿದು ಬಂದಿದೆಯೆಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪ್ರತಿ ರಾತ್ರಿ ಎಂಟು ಮಂದಿ ಸೇರಿಕೊಂಡು ಒಣಗಿದ ಚಪಾತಿಗಳನ್ನು ಸುಟ್ಟು ಟೂಥ್ ಬ್ರಶ್ ಗಳನ್ನು ಕೀ ಆಕಾರಕ್ಕೆ ತಿರುಗಿಸಿದ್ದರು. ವಿಶೇಷವಾಗಿರಾತ್ರಿ ಹೊತ್ತು ಭದ್ರತಾ ಸಿಬ್ಬಂದಿ ಸೆಲ್ ಪರೀಕ್ಷಿಸಲು ಬರದೇ ಇರುವುದರಿಂದ ಹಾಗೂ ‘ಬಿ’ ಬ್ಲಾಕಿನ ಮುಖ್ಯ ಗೇಟ್ ಮುಚ್ಚಿರುವುದರಿಂದ ಸೆಲ್ ಒಳಗಡೆ ಮುಕ್ತವಾಗಿ ತಿರುಗಾಡಲು ಅನುಮತಿಸಲಾಗುತ್ತದೆ.
ಹೀಗೆ ಅವರು ಹಲವು ರಾತ್ರಿ ಒಣಗಿದ ಚಪಾತಿಗಳನ್ನು ಸುಟ್ಟು ತಮ್ಮ ಕಾರ್ಯ ಸಾಧಿಸಿರಬಹುದೆಂದು ಊಹಿಸಲಾಗಿದೆ. ಮೇಲಾಗಿ ಅವರಿಗೆನೀಡಲಾಗಿದ್ದ ಸುಮಾರು 36 ಬೆಡ್ ಶೀಟುಗಳನ್ನೇ ಅವರುಏಣಿಯಂತೆ ಉಪಯೋಗಿಸಿ ಪರಾರಿಯಾಗಿದ್ದರೆಂಬ ಮಾಹಿತಿಯೂ ಹಿಂದುಸ್ತಾನ್ ಟೈಮ್ಸ್ ವರದಿಯಿಂದ ತಿಳಿದು ಬರುತ್ತದೆ.
ಎಂಟು ಮಂದಿಯೂ ಜೈಲಿನ ಮುಖ್ಯ ವಾರ್ಡನ್ ರಮಾಶಂಕರ್ ಯಾದವ್ ಆವರ ಕತ್ತನ್ನು ಸೀಳಿ ಹಾಗೂ ಅವರ ಸಹಾಯಕ ವಾರ್ಡನ್ ನ್ನು ಒತ್ತೆಯಾಳಾಗಿ ಹಿಡಿದು ತಮ್ಮ ಕಾರ್ಯ ಸಾಧಿಸಿದ್ದರು.