ಧರ್ಮದ ವಿಷಯಗಳನ್ನು ಧಾರ್ಮಿಕ ವಿದ್ವಾಂಸರು ಹೇಳಿದರೆ ಸಾಕು: ಕಾಂತಪುರಂ ಉಸ್ತಾದ್
ಕೋಝಿಕ್ಕೋಡ್, ನವೆಂಬರ್ 7; ಧರ್ಮದ ವಿಷಯಗಳನ್ನು ಧಾರ್ಮಿಕ ವಿದ್ವಾಂಸರು ಹೇಳಬೇಕು ಇಲ್ಲದಿದ್ದರೆ ಅದರಲ್ಲಿ ಅಪಾಯವಾಗಬಹುದು ಎಂದು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ ಎಂದು ವರದಿಯಾಗಿದೆ. ಮಾಪ್ಪಿಳ ಮಲಬಾರ್‌ನ ಸಾಮೂದಿರಿಗಳು ಎಂಬ ಹೆಸರಿನಲ್ಲಿ ಎಸ್ಸೆಸೆಫ್ ಜಿಲ್ಲಾ ಕಮಿಟಿ ಏರ್ಪಡಿಸಿದ್ದ ಮಾನವ ಸಂಗಮದಲ್ಲಿ ಸೌಹಾರ್ದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ರಾಜಕಾರಣಿಗಳು ರಾಜಕೀಯವನ್ನು ಗಮನಿಸಿ ಮುಂದುವರಿಯಲಿ. ಅರ್ಹತೆಯಿಲ್ಲದವರ ಅಭಿಪ್ರಾಯಗಳಿಂದ
ಅಪಾಯಗಳಾಗಬಹುದು.ಶರೀಅತ್ ಸಮ್ಮೇಳನವನ್ನು ಕೂಡಾ ಕೆಲವರು ಇತರರನ್ನು ಪರಿಹಾಸ್ಯಮಾಡುವುದಕ್ಕೆ ಉಪಯೋಗಿಸುತ್ತಿದ್ದಾರೆ. ಇಸ್ಲಾಮ್ ಮತ್ತು ಮುಸ್ಲಿಮರ ಪರಸ್ಪರ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಕಾಂತಪುರಂ ಹೇಳಿದ್ದಾರೆ.
ಜನರನ್ನು ವಿವಿಧ ಗುಂಪುಗಳಾಗಿಸಿ ರಾಜಕೀಯ ಲಾಭವೆತ್ತಲು ಬಯಸುವ ಸಂಘಪರಿವಾರ ಫ್ಯಾಶಿಸಂ ವಿರುದ್ಧ ಧಾರ್ಮಿಕ ಸಮುದಾಯಗಳು ಮತ್ತು ಜಾತ್ಯತೀತ ವ್ಯಕ್ತಿಗಳು ಒಗ್ಗೂಡಿ ನಿಲ್ಲಬೇಕಿದೆ ಎಂದು ಪ್ರಖ್ಯಾತ ಮಾನವಸಂಗಮದ ಪ್ರಯುಕ್ತ ನಡೆದ ಮುಕ್ತಚರ್ಚೆಯಲ್ಲಿ ಪ್ರಮುಖ ಸಾಮಾಜಿಕ ಹೋರಾಟಗಾರ ಡಾ.ಸುರೇಶ್ ಖೈರ್ನಾರ್ ಹೇಳಿದ್ದಾರೆ. ಭಾರತದಲ್ಲಿ ರೂಪುಗೊಂಡಿರುವ ದಲಿತ-ಮುಸ್ಲಿಂ ಒಗ್ಗಟ್ಟನ್ನು ಮುಖ್ಯ ರಾಜಕೀಯ ಪಕ್ಷಗಳು ಭಯದಿಂದ ನೋಡುತ್ತಿವೆ ಎಂದು ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾರೊಂದಿಗೆ ಹೊರಗೆ ಹಾಕಲಾಗಿದ್ದ ಡಾ.ಸುಂಕಣ್ಣ ವೆಲ್‌ಪುಲ ಹೇಳಿದ್ದಾರೆಂದುವರದಿಯಾಗಿದೆ.