ಬಿಜೆಪಿ ವಿರುದ್ಧ ಒಗ್ಗೂಡಿ ಹೋರಾಡಬೇಕೆಂದ ಮಮತಾಗೆ ಬೆಂಬಲ ಸೂಚಿಸಿದ ಇತರ ಪಕ್ಷಗಳು
ಕೊಲ್ಕೊತಾ, ನವೆಂಬರ್ 7: ಬಿಜೆಪಿಯ ಕೋಮುವಾದಿ ರಾಜಕೀಯ ವಿರುದ್ದ ಒಗ್ಗೂಡಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಹೇಳಿಕೆಯನ್ನು ಮುಖ್ಯ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಜೆಡಿಯು, ಸಮಾಜವಾದಿ ಪಾರ್ಟಿ,ಆಮ್ ಆದ್ಮಿ ಪಾರ್ಟಿ ಬೆಂಬಲಿಸಿವೆ ಎಂದು ವರದಿಯಾಗಿದೆ. ಕಳೆದ ಕೆಲವು ವಾರಗಳಿಂದ ರಾಷ್ಟ್ರೀಯ ರಾಜಕೀಯದಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಮಮತಾ ಬಿಜೆಪಿ ಸರಕಾರದ ವಿರುದ್ಧ ಒಟ್ಟಾಗಿ ಹೋರಾಟನಡೆಸಲು ಕರೆ ನೀಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಮೈತ್ರಿರಂಗ ರಚಿಸಲಾಗುವುದೆಂದು ಮಮತಾ ಸೂಚನೆ ನೀಡಿದ್ದಾರೆ.
ನಾವು ಒಟ್ಟಿಗೆ ಹೋರಾಡೋಣ, ಈಗ ನಾವು ಬೇರೆ ಬೇರೆಯಾಗಿ ಹೋರಾಡುತ್ತಿದ್ದೇವೆ. ಹೆಚ್ಚಿನವು ದೇಶದಫೆಡರಲಿಸಂ ವಿರುದ್ಧ ವಿಷಯಗಳಾಗಿವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು. ಭೋಪಾಲ್ ಸಿಮಿ ಕಾರ್ಯಕರ್ತರನ್ನು ಪೊಲೀಸರು ಕೊಂದು ಹಾಕಿರುವುದು, ರಾಹುಲ್ ಗಾಂಧಿ ಸಹಿತ ನಾಯಕರ ಬಂಧನ, ಎನ್‌ಡಿಟಿವಿ ನಿಷೇಧ ವಿರುದ್ಧ ಕ್ರಮ ಮುಂತಾದ ವಿಷಯಗಳು ತುರ್ತುಪರಿಸ್ಥಿತಿಗೆ ಸಮಾನವಾಗಿದೆ ಎಂದು ಮಮತಾ ಹೇಳಿದ್ದಾರೆ. ಮಮತಾರೊಂದಿಗೆ ಸಹಮತದೊಂದಿಗೆ ಸಾಗಲು ಪಕ್ಷಕ್ಕೆ ಯಾವುದೇ ಅಡೆತಡೆಗಳಿಲ್ಲ ಎಂದು ಎಐಸಿಸಿಯ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ. ಆದರೆ ಅಂತಿಮತೀರ್ಮಾನ ಹೈಕಮಾಂಡ್ ತೆಗೆದುಕೊಳ್ಳಬೇಕಾಗಿದೆ ಎಂದುಅವರು ಅಭಿಪ್ರಾಯ ಪ್ರಕಟಿಸಿದ್ದಾರೆ.
ಮಮತಾರ ನೇತೃತ್ವದಲ್ಲಿ ಜಾತ್ಯತೀತ ರಂಗ ರೂಪಿಸುವುದಾದರೆ ಬೆಂಬಲಿಸುತ್ತೇವೆ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಹೇಳಿದ್ದು ಸಂಪೂರ್ಣ ಸರಿಯಾದ ವಿಚಾರವೇ ಎಲ್ಲ ಬೆಂಬಲವನ್ನು ನೀಡಲು ನಾವು ಸಿದ್ಧ ಎಂದು ಸಮಾಜವಾದಿಪಾರ್ಟಿ ಕಾರ್ಯದರ್ಶಿ ಅಮರ್ ಸಿಂಗ್ ಹೇಳಿದ್ದಾರೆ. ದೀದಿಮತ್ತು ಅರವಿಂದ್ ಕೇಜ್ರಿವಾಲ್‌ರ ನಡುವೆ ಸೌಹಾರ್ದ ಸಂಬಂಧಗಳಿವೆ ಮೈತ್ರಿರಂಗದ ಬಗ್ಗೆ ಪಕ್ಷದ ನೇತೃತ್ವ ನಿರ್ಧರಿಸಲಿದೆ ಎಂದು ಆಮ್ ಆದ್ಮಿ ವಕ್ತಾರರು ಕೂಡಾ ಹೇಳಿದ್ದಾರೆಂದುವರದಿತಿಳಿಸಿದೆ.