×
Ad

ಯುವತಿಗೆ ಲೈಂಗಿಕ ಕಿರುಕುಳ ಯತ್ನ: ಪೊಲೀಸನ ಬಂಧನ

Update: 2016-11-07 11:44 IST

ಮದುಕ್ಕುಳಂ, ನವೆಂಬರ್ 7: ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಕರುನಾಗಪಳ್ಳಿ ಎಂಬಲ್ಲಿನ ಸುಧೀಶ್(36) ಬಂಧನಕ್ಕೋಳಗಾದ ಪೊಲೀಸ್ ಪೇದೆ ಎಂದು ಗುರುತಿಸಲಾಗಿದೆ.

   ಆರಾಟ್ಟುಪುಝ ವಲಿಯಯಿಕ್ಕಲ್ ನಿವಾಸಿಯಾದ ಯುವತಿ ಈತನ ವಿರುದ್ಧ ದೂರು ನೀಡಿದ್ದು, ಕಳೆದ ಗುರುವಾರ ಯುವತಿಯ ಮನೆಗೆ ಬಂದ ಪೊಲೀಸ್ ಆಕೆಯನ್ನು ಲೈಂಗಿಕವಾಗಿ ಬಳಸಲು ಯತ್ನಿಸಿದ್ದ. ಯುವತಿಮತ್ತು ಅವಳ ನೆರೆಮನೆಯ ವ್ಯಕ್ತಿಗೆ ಸಂಬಂಧಿಸಿದ ಪ್ರಕರಣವನ್ನು ತನಿಖೆ ಮಾಡಲು ಪೊಲೀಸ್ ಕಾನ್‌ಸ್ಟೇಬಲ್ ಬಂದಿದ್ದ. ಆವೇಳೆ ಯುವತಿಗೆ ಕಿರುಕುಳ ನೀಡಲು ಮುಂದಾಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆರೋಪಿ ಪೊಲೀಸನನ್ನು ಬಂಧಿಸಿ ನಂತರ ಕೋರ್ಟಿಗೆ ಹಾಜರುಪಡಿಸಲಾಗಿದ್ದು ಕೋರ್ಟು ರಿಮಾಂಡ್ ವಿಧಿಸಿದೆ ಎಂದು ವರದಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News