ರಿಲಯನ್ಸ್ ಎಲ್‌ವೈಎಫ್ ಸ್ಮಾರ್ಟ್ ಫೋನ್ ಸ್ಫೋಟ
ಹೊಸದಿಲ್ಲಿ, ನ.7: ರಿಲಯನ್ಸ್ ಎಲ್‌ವೈಎಫ್ ಸ್ಮಾರ್ಟ್ ಫೋನ್ ನ ಬ್ಯಾಟರಿಯೊಂದು ಸ್ಫೋಟಗೊಂಡ ಘಟನೆ ನಡೆದಿದೆ. ತನ್ವೀರ್ ಸಾದಿಕ್ ಎಂಬವರು ತಮ್ಮ ಸುಟ್ಟು ಹೋದ ಸ್ಮಾರ್ಟ್ ಫೋನಿನ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ. ‘‘ರಿಲಯನ್ಸ್ ಜಿಯೋ ದ ರಿಲಯನ್ಸ್ ಎಲ್‌ವೈಎಫ್ ಸ್ಮಾರ್ಟ್ ಫೊನ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ. ನನ್ನ ಕುಟುಂಬ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಯಿತು.’’
ಸಾದಿಕ್ ಅವರು ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಒಮರ್ ಅಬ್ದುಲ್ಲಾ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ಅವರು ಪೋಸ್ಟ್ ಮಾಡಿದ ಚಿತ್ರಗಳಲ್ಲಿ ಸ್ಫೋಟಗೊಂಡ ಬ್ಯಾಟರಿ ಹಾಗೂ ಫೋನಿನ ಹಿಂದೆ ಎಲ್‌ವೈಎಫ್ ಎಂದು ಬರೆದಿರುವುದು ಕಾಣಿಸುತ್ತದೆ.
ಬ್ಯಾಟರಿ ಸ್ಫೋಟಗೊಳ್ಳಲು ಕಾರಣವೇನೆಂದು ಸಾದಿಕ್ ಬರೆದಿಲ್ಲ ಹಾಗೂ ಸ್ಮಾರ್ಟ್ ಫೋನಿನ ಮಾಡೆಲ್ ಬಗ್ಗೆ ಕೂಡ ಏನೂ ಹೇಳಿಲ್ಲ. ಚಿತ್ರದಲ್ಲಿ ಗಮನಿಸಿದಂತೆ ಅದು ಎಲ್‌ವೈಎಫ್ ವಾಟರ್ 5 ಎಂದು ತಿಳಿಯುತ್ತದೆ. ಈ ಫೋನಿಗೆ 2,920 ಎಂಎಎಚ್ ಸಾಮರ್ಥ್ಯದ ಲೀಥಿಯಂ-ಐಯಾನ್ ಬ್ಯಾಟರಿಯಿದೆ.
ಸಾದಿಕ್ ಅವರ ಟ್ವೀಟಿಗೆ ರಿಲಯನ್ಸ್ ಎಲ್‌ವೈಎಫ್ ಪ್ರತಿಕ್ರಿಯಿಸಿದ್ದು ಘಟನೆಯ ತನಿಖೆ ನಡೆಸುವುದಾಗಿ ಹೇಳಿದೆ.
ತಾನು ವಿಶ್ವ ದರ್ಜೆಯ ಗುಣಮಟ್ಟದನ್ವಯ ಫೋನುಗಳನ್ನು ನಿರ್ಮಿಸುತ್ತಿರುವುದಾಗಿಯೂ ಪ್ರತಿಯೊಂದು ಫೋನು ಕಠಿಣ ಗುಣಮಟ್ಟ ಪರೀಕ್ಷೆಗೆ ಒಳಗಾಗುತ್ತದೆಯೆಂದೂ ಕಂಪೆನಿ ಹೇಳಿಕೊಂಡಿದೆ.
ಕಂಪೆನಿಯು ಅರ್ತ್, ವಿಂಡ್, ವಾಟರ್, ಫ್ಲೇಮ್ ಬ್ರ್ಯಾಂಡುಗಳ ಸ್ಮಾರ್ಟ್ ಫೋನ್ ಉತ್ಪಾದಿಸುತ್ತಿದ್ದು ಇತ್ತೀಚೆಗೆ ಎಲ್ ವೈ ಎಫ್ ಎಫ್ 1 ಹಾಗೂ ಎಲ್ ವೈ ಎಫ್ ಎಫ್ 1 ಪ್ಲಸ್‌ಸ್ಮಾರ್ಟ್ ಫೋನುಗಳನ್ನು ಹೊರ ತಂದಿದೆ