×
Ad

ಬಿಗ್‌ಬಿ ಯ ಹೆಸರು ಅಮಿತಾಭ್ ಬಚ್ಚನ್ ಅಲ್ಲ !

Update: 2016-11-07 13:30 IST

ಹೆಸರಿನಲ್ಲೇನೋ ಮಹಾತ್ಮೆಯಿದೆ. ಇಲ್ಲದಿದ್ದರೆ ಇಷ್ಟೊಂದು ಬಾಲಿವುಡ್ ತಾರೆಯರು ಸಿನೆಮಾ ರಂಗಕ್ಕೆ ಕಾಲಿಡುವಾಗ ತಮಗಾಗಿ ಹೊಸ ಹೆಸರನ್ನು ಇಟ್ಟುಕೊಳ್ಳುವುದು ಏಕೆ? ತಾರೆಯರು ತಾವು ಕೂಲ್ ಆಗಿ ಕಾಣಲು ಮತ್ತು ತಮ್ಮ ವ್ಯಕ್ತಿತ್ವವನ್ನು ಮುಂದಿಡುವ ಹೆಸರು ಆರಿಸಿಕೊಳ್ಳುತ್ತಾರೆ. ಶಾರುಖ್ ಖಾನ್ ಅವರ ಹೆಸರು ರಾಹುಲ್ ಅಥವಾ ರಾಜ್ ಎಂದು ಇರದೆ ಇದ್ದಲ್ಲಿ ಅವರು ಕಿಂಗ್ ಖಾನ್ ಆಗುತ್ತಿದ್ದರೆ?

ಅಲ್ಲದೆ ಅಕ್ಷಯ್ ಕುಮಾರ್, ಸನ್ನಿ ಲಿಯೋನ್, ಕತ್ರಿನಾ ಕೈಫ್ ಅಥವಾ ಮಲ್ಲಿಕಾ ಶೆರಾವತ್ ಎನ್ನುವುದು ಇವರ ನಿಜವಾದ ಹೆಸರುಗಳಲ್ಲ! ಹೀಗೆ ತಮ್ಮ ಹೆಸರು ಬದಲಿಸಿಕೊಂಡ ಕೆಲ ತಾರೆಯರ ವಿವರ ಇಲ್ಲಿದೆ.

►ಇನ್‌ಕ್ವಿಲಾಬ್ ಶ್ರೀವಾಸ್ತವ

ಈ ಹೆಸರಿನಿಂದ ಅವರು ತೆರೆಯ ಮೇಲೆ ಬಂದಿದ್ದರೆ ಬಿಗ್‌ಬಿ ಎನ್ನುವ ಕೂಲ್ ನಿಕ್‌ನೇಮ್ ಪಡೆದುಕೊಳ್ಳುವುದು ಸಾಧ್ಯವಾಗುತ್ತಿತ್ತೆ?

►ಶಿವಾಜಿರಾವ್ ಗಾಯಕ್ವಾಡ್

ಅವರು ಹುಟ್ಟುವಾಗ ಶಿವಾಜಿ ರಾವ್ ಗಾಯಕ್ವಾಡ್ ಎಂದು ಹೆಸರಿತ್ತು. ಆದರೆ ಹುಟ್ಟಿದ 2 ನಿಮಿಷಗಳಲ್ಲಿ ತಮ್ಮ ಹೆಸರನ್ನು ರಜನಿ ಎಂದು ಬದಲಿಸಿಕೊಂಡರು!

►ಹೃತಿಕ್ ನಾಗರತ್

ಅಂತಹ ಹಾವಿನ ನರ್ತನ ನಾಟ್ಯ ಕಲೆ ಸಹಜವಾಗಿ ಇವರಿಗೆ ಬಂದಿದ್ದರಲ್ಲಿ ಅಚ್ಚರಿಯಿಲ್ಲ!

►ರಣ್ವೀರ್ ಭಾವ್ನಾನಿ

ದೀಪಿಕಾ ಭಾವ್ನಾನಿ ಎನ್ನುವ ಹೆಸರನ್ನು ಯೋಚಿಸಿ ನೋಡಿ. ನಾವು ಯಾಕೆ ಹೀಗೆ ಹೇಳುತ್ತಿದ್ದೇವೆ ಎನ್ನುವುದು ನಿಮಗೆ ಗೊತ್ತೇ ಇರುತ್ತದೆ.

►ಶಾಹಿದ್ ಖತ್ತರ್

ಸಿನೆಮಾ ವೃತ್ತಿಜೀವನ ಇಲ್ಲದೆ ಹೋಗಿದ್ದರೆ ಈ ಹೆಸರಿನಿಂದ ಶಾಹಿದ್ ಖಚಿತವಾಗಿ ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಂತು ಗೆಲ್ಲಬಹುದಾಗಿತ್ತು.

►ಫರ್ಹಾನ್ ಅಬ್ರಾಹಾಂ

ಇಲ್ಲ. ಇದು ಇಬ್ಬರು ನಟರ ಹೆಸರಲ್ಲ. ಇದು ಇವರ ಹುಟ್ಟು ಹೆಸರು.

►ವಿಶಾಲ್ ದೇವಗನ್

ಹೆಸರು ವಿಶಾಲ್. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಹೆಸರು ಈಗಿನ ನಟ ಸಾರ್ವಭೌಮ ಚಹರೆಗೆ ತಕ್ಕುದಲ್ಲ.

►ಪ್ರೀತಂ ಸಿಂಗ್ ಜಿಂತಾ

ಇಲ್ಲ. ಬೇಡವೇ ಬೇಡ. ಕೆನ್ನೆಗೆ ಬೀಳುವ ಗುಳಿಗಳೂ ಈ ಹೆಸರಿಗೆ ಯಶಸ್ಸಿನ ತಾಕತ್ತು ಕೊಡಲಾರದು.

►ಭಾನುರೇಖಾ ಗಣೇಶನ್

ಅಂತಹಾ ನಟನಾ ದೇವತೆಗೆ ಇದು ಬಲು ದೊಡ್ಡ ಹೆಸರು.

►ಅಜಯ್ ಸಿಂಗ್ ಡಿಯೋಲ್

ಉದ್ಯಮದಲ್ಲಿ ಬಹಳ ಸರಳ ವ್ಯಕ್ತಿಗಳು ಡಿಯೋಲ್ ಕುಟುಂಬ. ಅವರ ಹೆಸರೇ ಅದನ್ನು ಹೇಳುತ್ತದೆ. ಆದರೆ ಮೂಲ ಹೆಸರುಗಳು!

►ವಿಜಯ್ ಸಿಂಗ್ ಡಿಯೋಲ್

ಇಬ್ಬರೂ ಸಹೋದರರನ್ನು ಜೊತೆಯಾಗಿ ತನ್ನಿ. ನಿಮಗೆ ಅಜಯ್ ಮತ್ತು ವಿಜಯ್ ಜೊತೆಯಾಗಿ ಸಿಗುತ್ತಾರೆ.

►ಗೋವಿಂದ ಅರುಣ್ ಅಹುಜಾ

ಗೋವಿಂದರಿಗೆ ಸರ್‌ನೇಮ್ ಇಲ್ಲದಿದ್ದರೇ ಚೆನ್ನ ಎನ್ನುವುದು ತಿಳಿದಿತ್ತು.

►ಜೈಕಿಶನ್ ಕಾಕು ಭಾಯ್

ಬಾಲಿವುಡ್‌ನ ಬೀರು ಭಾಯ್ ಎನ್ನುವ ಹೆಸರಲ್ಲೇ ಹುಟ್ಟಿದ್ದಾರೆ. ಕಾಕು ಭಾಯ್!

►ಗೌರಾಂಗ ಚಕ್ರವರ್ತಿ

ಇಂತಹ ಹೆಸರು ಖಚಿತವಾಗಿ ಸ್ತ್ರೀಯರನ್ನು ಸಮ್ಮೋಹನಗೊಳಿಸಲು ಶಕ್ತವಾಗದು.

►ಕರೇನ್‌ಜಿತ್ ಕೌರ್ ವೋರಾ

ಪಂಜಾಬ್ ರಾಜ್ಯವನ್ನು ಬಾಲಿವುಡ್ ನಕ್ಷೆಯಲ್ಲಿ ತರುವ ದೊಡ್ಡ ಅವಕಾಶ ಕಳೆದು ಹೋಯಿತು.

►ಜಿತೇಂದ್ರ ಕುಮಾರ್ ತುಲಿ

ಮದುವೆಯ ಸಂದರ್ಭದಲ್ಲಿ ಶಾರುಖ್ ಖಾನ್‌ರಿಗೆ ತಮ್ಮ ಹೆಸರನ್ನು ಜಿತೇಂದ್ರ ಕುಮಾರ್ ತುಲಿ ಎಂದು ಬದಲಿಸುವಂತೆ ಅವರ ಹಿಂದೂ ಅತ್ತೆ-ಮಾವಂದಿರು ಹೇಳಿದ್ದರು. ಆದರೆ ಅವರು ಒಪ್ಪದೆ ಇದ್ದುದು ಒಳ್ಳೆಯದಾಯಿತು.

ಕೃಪೆ: https://www.scoopwhoop.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News