×
Ad

ನಜೀಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆ ನಡೆಸಿ: ತಾಯಿ ಫಾತಿಮಾ

Update: 2016-11-07 14:06 IST

ಹೊಸದಿಲ್ಲಿ, ನವೆಂಬರ್ 7: ನಾಪತ್ತೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಬೇಕೆಂದು ನಜೀಬ್‌ನ ತಾಯಿ ಫಾತಿಮಾ ನಫೀಸ್ ಹೇಳಿದ್ದಾರೆಂದು ವರದಿಯಾಗಿದೆ. ತಾನುತನ್ನ ಪುತ್ರ ಮರಳಿ ಬರಬೇಕೆಂದು ಮಾತ್ರ ಬಯಸುತ್ತಿದ್ದೇನೆ. ಪೊಲೀಸರಿಗೆ ಆತನನ್ನು ಹುಡುಕಿ ಕರೆತರಲು ಸಾಧ್ಯವಾಗಿಲ್ಲ ದಯವಿಟ್ಟು ಪ್ರಕರಣವನ್ನುಸಿಬಿಐಗೆ ಒಪ್ಪಿಸಲಿ ಎಂದು ಮಾಧ್ಯಮಗಳೊಂದಿಗೆ ಮಾತಾಡುತ್ತಾ ಅವರು ಹೇಳಿದ್ದಾರೆ. ಈ ಬೇಡಿಕೆಯನ್ನೇ ಮುಂದಿಟ್ಟು ಕಳೆದ ದಿವಸ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದೆವು. ಅದರೆ ಪೊಲೀಸರು ನಮ್ಮನ್ನು ಬಲಪ್ರಯೋಗಿಸಿ ಅಲ್ಲಿಂದ ತೆರವು ಗೊಳಿಸಿತು ಎಂದು ಫಾತಿಮಾ ಹೇಳಿದ್ದಾರೆ.

ನಿನ್ನೆ ಪ್ರಕರಣ ತನಿಖೆಯಲ್ಲಿ ದಿಲ್ಲಿಪೊಲೀಸರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆಂದು ಆರೋಪಿಸಿ ಜೆಎನ್‌ಯು ವಿದ್ಯಾರ್ಥಿಗಳು ಇಂಡಿಯಾ ಗೇಟ್ ಸಮೀಪ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಜೀಬ್‌ರ ತಾಯಿಯನ್ನು ಬಲಪ್ರಯೋಗಿಸಿ ಬಂಧಿಸಿ ಬಿಡುಗಡೆಗೊಳಿಸಲಾಗಿತ್ತು. ಅಕ್ಟೋಬರ್ ಹದಿನೈದರಂದು ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆಗೊಳಾಗಿದ್ದ ಮುಜೀಬ್ ಆನಂತರ ಕ್ಯಾಂಪಸ್‌ನಿಂದ ನಾಪತ್ತೆಯಾಗಿದ್ದ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News