×
Ad

ಹೊಸ ದಾಖಲೆ ನಿರ್ಮಿಸಿದ ‘ಪುಲಿಮುರುಗನ್’

Update: 2016-11-07 16:58 IST

ತಿರುವನಂತಪುರ,ನ.7: ಮೋಹನಲಾಲ್ ಅಭಿನಯದ ‘ಪುಲಿಮುರುಗನ್’ 100 ಕೋ.ರೂ.ಕ್ಲಬ್ ಪ್ರವೇಶಿಸಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

25 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಾಹಸಪ್ರಧಾನ ಚಿತ್ರವು ಮಾನವ-ಪ್ರಾಣಿ ಸಂಘರ್ಷವನ್ನು ಆಧರಿಸಿದೆ. ಮೋಹನಲಾಲ್ ಬೇಟೆಗಾರ ಮುರುಗನ್ ಆಗಿ ನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪತ್ನಿ ಮೈನಾ ಪಾತ್ರವನ್ನು ಬಂಗಾಲಿ ನಟಿ ಕಮಲಿನಿ ಮುಖರ್ಜಿ ನಿರ್ವಹಿಸಿದ್ದಾರೆ.

ಪ್ರಸ್ತುತ ರಾಜಸ್ಥಾನದಲ್ಲಿ ಶೂಟಿಂಗ್‌ನಲ್ಲಿ ವ್ಯಸ್ತರಾಗಿರುವ ಮೋಹನಲಾಲ್, ಚಿತ್ರವು 100 ಕೋ.ರೂ.ಕ್ಲಬ್ ಪ್ರವೇಶಿಸಿರುವುದನ್ನು ಇಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಕಟಿಸಿದ್ದಾರೆ.

ಅ.7ರಂದು ಕೇರಳದಲ್ಲಿ ಬಿಡುಗಡೆಯಾಗಿರುವ ಟಾಮಿಚ್ಚನ್ ಮುಲಕುಪಾಡಂನಿರ್ಮಾಣ ಹಾಗೂ ವೈಶಾಖ್ ನಿರ್ದೇಶನದ ಈ ಚಿತ್ರ ಆಗಿನಿಂದಲೂ ಕಿಕ್ಕಿರಿದು ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಚಿತ್ರ ಬಿಡುಗಡೆಯಾದ ದಿನವೇ ಬಾಕ್ಸ್ ಆಫೀಸ್ ಕಲೆಕ್ಷನ್ ನಾಲ್ಕು ಕೋ.ರೂ. ದಾಟಿದ್ದು,ಇದು ಮಲಯಾಳಂ ಚಿತ್ರವೊಂದಕ್ಕೆ ಅತ್ಯಂತ ಹೆಚ್ಚಿನ ಮೊದಲ ದಿನದ ಗಳಿಕೆಯಾಗಿದೆ.

ಬ್ರಿಟನ್,ಯುರೋಪ್,ಯುಎಇ ಸೇರಿದಂತೆ ವಿದೇಶಗಳಲ್ಲೂ ಚಿತ್ರವು ಬಿಡುಗಡೆ ಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News