ಸುಶ್ಮಾ ತುರ್ತು ಸ್ಪಂದನ : ರಾಜಸ್ಥಾನಕ್ಕೆ ಬಂದ ಪಾಕಿಸ್ತಾನಿ ಮದುಮಗಳು!

Update: 2016-11-07 13:23 GMT

ಜೋಧಪುರ, ನ.7: ಒಂದು ತಿಂಗಳ ಅನಿಶ್ಚಿತತೆಯ ಬಳಿಕ ಜೋಧಪುರದ ನರೇಶ್ ತೆವಾನಿ ಎಂಬವರು ಸೋಮವಾರ ಕರಾಚಿಯ ಪ್ರಿಯಾ ಬಚ್ಚಾನಿ ಎಂಬವರನ್ನು ವಿವಾಹವಾಗಿದ್ದಾರೆ.

ಇದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‌ರ ಮಧ್ಯಪ್ರವೇಶದಿಂದ ಸಾಧ್ಯವಾಯಿತು. ವಿವಾಹಕ್ಕಾಗಿ ವಧು ಹಾಗೂ ಆಕೆಯ ಕುಟುಂಬಕ್ಕೆ ಪಾಕಿಸ್ತಾನದ ಭಾರತೀಯ ದೂತಾವಾಸವು ವೀಸಾ ಮಂಜೂರು ಮಾಡುವಂತೆ ಅವರು ಖಚಿತಪಡಿಸಿದ್ದರು.

ನರೇಶ್ ಹಾಗೂ ಪ್ರಿಯಾರ ವಿವಾಹ ನಿಶ್ಚಯವು ಮೂರು ವರ್ಷಗಳ ಹಿಂದೆಯೇ ನಡೆದಿತ್ತು. ನ.7ರಂದು ಜೋಧಪುರದಲ್ಲಿ ವಿವಾಹವೆಂದು ನಿರ್ಧಾರವಾಗಿತ್ತು.
ಆದರೆ, ವಧು ಹಾಗೂ ಆಕೆಯ ಕುಟುಂಬಕ್ಕೆ ವೀಸಾ ಮಂಜೂರು ಮಾಡುವಲ್ಲಿ ಪಾಕಿಸ್ತಾನದ ಭಾರತೀಯ ದೂತಾವಾಸ ಮಾಡಿದ ವಿಳಂಬದಿಂದಾಗಿ ಮದುವೆ ನಡೆಯುವುದೋ ಇಲ್ಲವೋ ಎಂಬ ಭೈವಿತ್ತು. ಅಂತಿಮವಾಗಿ, ವಿವಾಹದ ದಿನ ಹತ್ತಿರ ಬರುತ್ತಿದ್ದಂತೆ, ವರನು ಸುಶ್ಮಾರಿಗೆ ಟ್ವೀಟ್ ಮಾಡಿ, ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಪಾಕಿಸ್ತಾನಿ ಕುಟುಂಬದ ವಧು ಸಹಿತ 35 ಮಂದಿಗೆ ವೀಸಾಗಳ ವ್ಯವಸ್ಥೆ ಮಾಡುವಂತೆ ವಿನಂತಿಸಿಕೊಂಡಿದ್ದನು.
ಶೀಘ್ರವಾಗಿ ಸ್ಪಂದಿಸಿದುದಕ್ಕಾಗಿ ತಾವು ಸಚಿವೆಗೆ ಕೃತಜ್ಞರಾಗಿದ್ದೇವೆ. ಜೋಧಪುರಕ್ಕೆ ಬರಲು ಎಲ್ಲ 35 ಮಂದಿಗೆ 2 ಭಾಗಗಳಲ್ಲಿ ವೀಸಾಗಳು ದೊರೆತಿವೆಯೆಂದು ನರೇಶ್ ಹೇಳೀದ್ದಾರೆ.

ಪ್ರಿಯಾ ಹಾಗೂ ಆಕೆಯ ಕುಟುಂಬಿಕರು ರವಿವಾರ ಜೋಧಪುರಕ್ಕೆ ಆಗಮಿಸಿದ್ದು, ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ. ಯೋಜನೆಯಂತೆ ಎಲ್ಲವೂ ನಡೆದಿರುವುದಕ್ಕೆ ತನಗೆ ಸಂತೋಷವಾಗಿದೆ. ತಾವಿಲ್ಲಿ ಸಮಾರಂಭವನ್ನು ಆನಂದಿಸುತ್ತಿದ್ದೇವೆಂದು ಪ್ರಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News