×
Ad

ಗೃಹಿಣಿಯನ್ನು ದೂಡಿಹಾಕಿ 9.65 ಲಕ್ಷ ರೂ.ದೋಚಿದ ದುಷ್ಕರ್ಮಿಗಳು

Update: 2016-11-08 12:15 IST

ಪತ್ತನಂತಿಟ್ಟ, ನ. 8: ಬ್ಯಾಂಕಿನಿಂದ ಹಣ ಡ್ರಾ ಮಾಡಿ ಮರಳುತ್ತಿದ್ದ ಗೃಹಿಣಿಯೊಬ್ಬರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಬಂದ ತಂಡವೊಂದು ಮಹಿಳೆಯ ಕೈಯಲ್ಲಿದ್ದ 9.65 ಲಕ್ಷರೂಪಾಯಿ ಕಿತ್ತು ಪರಾರಿಯಾದ ಘಟನೆ ಸೋಮವಾರ ಮಧ್ಯಾಹ್ನದ ವೇಳೆ ಜಿಲ್ಲಾ ವಿಜಿಲೆನ್ಸ್ ಕಚೇರಿ ಬಳಿ ನಡೆದಿದೆ ಎಂದು ವರದಿಯಾಗಿದೆ.

 ವೆಟ್ಟಿಪ್ರಂ ಮೊಡಿಪ್ಪಡಿ ನಿವಾಸಿಯಾದ ಸುಶೀಲಾ ಹಣಕಳೆದುಕೊಂಡ ಮಹಿಳೆಯಾಗಿದ್ದು, ಅವರು ಹೊಸದಾಗಿ ಕಟ್ಟಿಸುವ ಮನೆಯ ಅಗತ್ಯಕ್ಕಾಗಿ ಪತ್ತನಂತಿಟ್ಟ ಕಾಲೇಜು ರಸ್ತೆಯ ಸರ್ವೀಸ್ ಸಹಕಾರಿ ಬ್ಯಾಂಕ್‌ನಿಂದ ಹಣ ಪಡೆದು ಮನೆಗೆ ಮರಳುತ್ತಿದ್ದಾಗ ಈ ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಯುವಕರು ಹಣವಿದ್ದ ಹ್ಯಾಂಡ್ ಬ್ಯಾಗ್‌ನ್ನು ಕಿತ್ತುಕೊಂಡು ಪರಾರಿಯಾದರು. ಪತ್ತನಂತಿಟ್ಟ ಸರ್ಕಲ್ ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್‌ರ ನೇತೃತ್ವದಲ್ಲಿ ಪೊಲೀಸರ ತಂಡ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News