×
Ad

ಭಾರತ ಮೂಲದ ಕ್ಯಾಬ್ ಡ್ರೈವರ್ ಗೆ ವರ್ಷದ ಆಸ್ಟ್ರೇಲಿಯನ್ ಗೌರವ

Update: 2016-11-08 17:51 IST

ಮೆಲ್ಬರ್ನ್, ನ. 8: ಆಸ್ಟ್ರೇಲಿಯದಲ್ಲಿ ಸಿಖ್ ಸಮುದಾಯಕ್ಕೆ ಸಲ್ಲಿಸಿದ ಸೇವೆ ಹಾಗೂ ಎಲ್ಲ ಬಣ್ಣಗಳ ಜನರ ಬದುಕನ್ನು ಧನಾತ್ಮಕವಾಗಿ ಪ್ರಭಾವಿತಗೊಳಿಸಿರುವುದಕ್ಕಾಗಿ ತೇಜಿಂದರ್ ಪಾಲ್ ಸಿಂಗ್‌ರಿಗೆ ‘ವರ್ಷದ ಆಸ್ಟ್ರೇಲಿಯನ್’ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜನವರಿ 25ರಂದು ನಡೆಯಲಿರುವುದು.

ಈ ಸುದ್ದಿಯು ಅವರ ಸಮುದಾಯದ ಜನರಲ್ಲಿ ಸಂಚಲನ ಮೂಡಿಸಿದೆ. ‘‘ತೇಜಿಂದರ್‌ರನ್ನು ಸನ್ಮಾನಿಸುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ಇದು ನಮಗೆಲ್ಲರಿಗೂ ಸಂದ ಗೌರವ’’ ಎಂದು ಮೆಲ್ಬರ್ನ್‌ನಲ್ಲಿ ವಾಸಿಸುತ್ತಿರುವ ಗುರ್‌ಬಕ್ಸ್ ಸಿಂಗ್ ಖಾಲ್ಸ ಹೇಳುತ್ತಾರೆ.
ತೇಜಿಂದರ್ ‘ಫೂಡ್ ವ್ಯಾನ್’ ಎಂಬ ಹೆಸರಿನ ಸಂಘಟನೆಯ ಸ್ಥಾಪಕ. ಅವರನ್ನು ಮನೆಯಿಲ್ಲದವರು ಮತ್ತು ಬಡವರ ಆಪತ್ಬಾಂಧವ ಎಂಬುದಾಗಿ ಪರಿಗಣಿಸಲಾಗಿದೆ.

‘ವರ್ಷದ ಆಸ್ಟ್ರೇಲಿಯನ್’ ಪ್ರಶಸ್ತಿಯುಲ್ಲಿ ನಾಲ್ಕು ವಿಭಾಗಗಳಿವೆ. ಅವುಗಳ ಪೈಕಿ ಒಂದು ‘ಆಸ್ಟ್ರೇಲಿಯದ ಲೋಕಲ್ ಹೀರೊ’. ಈ ಪ್ರಶಸ್ತಿಯನ್ನು ತೇಜಿಂದರ್ ಪಡೆದುಕೊಂಡಿದ್ದಾರೆ.

ಆಸ್ಟ್ರೇಲಿಯದಲ್ಲಿರುವ ಹೆಚ್ಚಿನ ಪಂಜಾಬಿಗಳು ಟ್ಯಾಕ್ಸಿಗಳನ್ನು ಓಡಿಸುತ್ತಾರೆ. ಈ ಸಂದರ್ಭದಲ್ಲಿ ಅವರು ಹಲವು ಸಲ ಜನಾಂಗೀಯವಾಗಿ ನಿಂದನೆಗಳಿಗೆ ಗುರಿಯಾಗಬೇಕಾಗುತ್ತದೆ. ತೇಜಿಂದರ್ 2006ರಲ್ಲಿ ಭಾರತದಿಂದ ಇಲ್ಲಿಗೆ ಬಂದಾಗ ಅವರ ಟ್ಯಾಕ್ಸಿಯಲ್ಲಿ ಪ್ರಯಾಣಿಕನೊಬ್ಬ ಜನಾಂಗೀಯ ನಿಂದನೆ ಮಾಡಿದನು. ಆದರೆ, ಇದಕ್ಕೆ ತೇಜಿಂದರ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರೆಂದರೆ, ಪೇಟ ಧರಿಸುವ ಜನರನ್ನು ನೋಡುವ ಜನರ ರೀತಿಯಲ್ಲಿ ನಿಧಾನವಾಗಿ ಬದಲಾವಣೆಯುಂಟಾಯಿತು.

ಇದಕ್ಕೆ ಸಮಾಧಾನದಿಂದ ಪ್ರತಿಕ್ರಿಯಿಸಿದ ತೇಜಿಂದರ್, ಇತರ ಮಾನವರು ಹೇಗೆ ದೇವರ ಸೃಷ್ಟಿಯೋ ಅದೇ ರೀತಿ ಪೇಟ ಧರಿಸುವ ಜನರೂ ದೇವರ ಸೃಷ್ಟಿ ಎಂಬುದನ್ನು ವಿವರಿಸಿದರು. ಧಾರ್ಮಿಕ ನಂಬಿಕೆಗಾಗಿ ಮಾತ್ರ ತಾವು ತಮ್ಮ ತಲೆಗಳನ್ನು ಮುಚ್ಚಿಕೊಳ್ಳುತ್ತೇವೆ ಎಂದು ಹೇಳಿದರು.

ತನ್ನ ಪ್ರಯತ್ನದಲ್ಲಿ ಅವರು ಹಲವು ಗಣ್ಯರ ಬೆಂಬಲ ಗಳಿಸಿದರು. ಆ ಪೈಕಿ ಪ್ರಮುಖರು ನಾರ್ದರ್ನ್ ಟೆರಿಟರಿಯ ಮುಖ್ಯಮಂತ್ರಿ ಮೈಕಲ್ ಗನ್ನರ್.
‘ಕಷ್ಟದಲ್ಲಿರುವವರ ಪಾಲಿನ ಆಪದ್ಬಾಂಧವ’ ಎಂಬ ಹೆಗ್ಗಳಿಕೆಯನ್ನು ಅವರು ಶೀಘ್ರದಲ್ಲೇ ಪಡೆದುಕೊಂಡರು.

ಮನೆಯಿಲ್ಲದವರಿಗೆ ಹಾಗೂ ಅಗತ್ಯವಿರುವವರಿಗೆ ಊಟ ನೀಡಿರುವುದಕ್ಕಾಗಿ 2015ರಲ್ಲಿ ಅವರನ್ನು ‘ದಿನದ ಆಸ್ಟ್ರೇಲಿಯನ್’ ಪ್ರಶಸ್ತಿಯಿಂದ ಗೌರವಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News