×
Ad

ಪ್ರಧಾನಿಗೆ ಶಾರುಕ್ ಶ್ಲಾಘನೆ

Update: 2016-11-10 23:59 IST

ಮುಂಬೈ, ನ.10: ಕಪ್ಪು ಹಣದ ವಿರುದ್ಧ ಸಮರದಲ್ಲಿ ರೂ. 500 ಹಾಗೂ 1000ದ ನೋಟುಗಳನ್ನು ರದ್ದು ಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಬಾಲಿವುಡ್ ನಟ ಶಾರುಕ್ ಖಾನ್ ಶ್ಲಾಘಿಸಿದ್ದಾರೆ.

ರಜನಿಕಾಂತ್, ಅಮಿತಾಭ್ ಬಚ್ಚನ್, ಕರಣ್ ಜೋಹರ್ ಹಾಗೂ ಅನುರಾಗ್ ಕಶ್ಯಪ್‌ರಂತಹ ಖ್ಯಾತನಾಮರೂ ಈ ಕ್ರಮವನ್ನು ಬೆಂಬಲಿಸಿದ್ದಾರೆ.

ಪ್ರಧಾನಿ ಕೈಗೊಂಡ ಈ ಕ್ರಮ ‘ಮಹಾನ್ ಹೆಜ್ಜೆಯಾಗಿದೆ’ ಎಂದು ಶಾರುಕ್ ಟ್ವೀಟಿಸಿದ್ದಾರೆ.

ಇದು ದೂರ ದೃಷ್ಟಿಯ, ಜಾಣತನದ ಹಾಗೂ ರಾಜಕೀಯ ಪ್ರೇರಿತವಲ್ಲದ ಕ್ರಮವಾಗಿದೆ. ಅದು ಭಾರತದ ಆರ್ಥಿಕತೆಯಲ್ಲಿ ಧನಾತ್ಮಕ ಬದಲಾವಣೆ ತರಲಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News