×
Ad

ವಿಎಸ್ ಅಚ್ಯುತಾನಂದನ್‌ಗೆ ಸೆಕ್ರಟರಿಯೇಟ್‌ನಲ್ಲಿ ಕಚೇರಿ ನೀಡಲು ಸಾಧ್ಯವಿಲ್ಲ: ಹಠ ಹಿಡಿದ ಕೇರಳ ಸರಕಾರ!

Update: 2016-11-12 13:08 IST

ತಿರುವನಂತಪುರಂ, ನ. 12: ಆಡಳಿತಸುಧಾರಣಾ ಆಯೋಗಕ್ಕೆ ಸೆಕ್ರಟರಿಯೇಟ್‌ನಲ್ಲಿ ಕಚೇರಿ ನೀಡಬೇಕೆನ್ನುವ ಮಾಜಿ ಮುಖ್ಯಮಂತ್ರಿ ಹಾಗೂ ಆಡಳಿತಸುಧಾರಣಾ ಆಯೋಗದ ಅಧ್ಯಕ್ಷ ವಿಎಸ್ ಅಚ್ಯುತಾನಂದನ್‌ರ ಮನವಿಯನ್ನು ಸರಕಾರ ತಳ್ಳಿಹಾಕಿದೆ. ಆಡಳಿತ ಸುಧಾರಣಾ ಆಯೋಗದ ಕಚೇರಿ ಐಎಂಜಿಯಲ್ಲಿ ಸಜ್ಜುಗೊಳಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಐಎಂಜಿಯಲ್ಲಿ ಅದರ ಕಚೇರಿ ನಿರ್ಮಿಲು 70 ಲಕ್ಷರೂಪಾಯಿ ಮಂಜೂರು ಮಾಡಲಾಗಿದೆ ಎಂದು ವರದಿಯಾಗಿದೆ.

ಸೆಕ್ರಟರಿಯೇಟ್ ಅನಕ್ಸಿನಲ್ಲಿ ಕಚೇರಿಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಅಚ್ಯುತಾನಂದನ್ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದರು.ಇದಕ್ಕೆ ಸಂಬಂಧಿಸಿ ಚೀಫ್ ಸೆಕ್ರಟರಿಯಿಂದ ಅಭಿಪ್ರಾಯವನ್ನು ಕೇಳಲಾಗಿತ್ತು. ಆದ್ದರಿಂದ ಈ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿಪಿಣರಾಯಿ ವಿಜಯನ್ ತಿಳಿಸಿದ್ದಾರೆ.

   ವಿಎಸ್ ಶಾಸಕರ ಹಾಸ್ಟೆಲ್‌ನ ಕೋಣೆಯನ್ನು ಆಡಳಿತ ಸುಧಾರಣಾ ಆಯೋಗದ ಕಚೇರಿಯಾಗಿ ಬಳಸಿದ್ದರು. ಅಧಿಕೃತ ವಸತಿಗೆ ಅನುಮತಿ ನೀಡಿದ್ದರಿಂದ ಶಾಸಕ ಹಾಸ್ಟೆಲ್‌ನಿಂದ ಕಚೇರಿಯನ್ನು ತೆರವು ಗೊಳಿಸಬೇಕೆಂದು ಅಚ್ಯುತಾನಂದನ್‌ರಿಗೆ ವಿಧಾನಸಭಾ ಕಾರ್ಯದರ್ಶಿ ಹೇಳಿದ್ದರು. ಬಳಿಕ ಶಾಸಕರ ಹಾಸ್ಟೆಲ್‌ನಿಂದ ಕಚೇರಿಯನ್ನು ವಿಎಸ್ ತೆರವು ಗೊಳಿಸಿದ್ದರ. ಆನಂತರ ಸೆಕ್ರಟರಿಯೇಟ್ ಅನಕ್ಸನಲ್ಲಿ ಆಯೋಗಕ್ಕೆ ಕಚೇರಿ ನೀಡಬೇಕೆಂದು ಮುಖ್ಯಕಾರ್ಯದರ್ಶಿಗೆ ವಿಎಸ್ ಪತ್ರ ಬರೆದಿದ್ದರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News