×
Ad

ನೋಟು ರದ್ದು ಆದೇಶ ಸ್ವಾಗತಿಸಿದ ಆಮಿರ್ ಖಾನ್ ಹೇಳಿದ್ದೇನು ?

Update: 2016-11-12 16:11 IST

ಮುಂಬೈ, ನ.12 : 500 , 1000 ರೂ . ನೋಟುಗಳನ್ನು ಹಠಾತ್ ರದ್ದು ಮಾಡುವ ಪ್ರಧಾನಿ ಮೋದಿ ನಿರ್ಧಾರದ ಬಗ್ಗೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವಂತೆಯೇ ಈಗ ಬಾಲಿವುಡ್ ನಟರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. 

ನಟ ಆಮಿರ್ ಖಾನ್ ಅವರು ಈ ವಿಷಯದಲ್ಲಿ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದು ದೇಶದ ಹಿತದ ಪ್ರಶ್ನೆ. ಇದರಿಂದ ಈಗ ಆಗುವ ಪರಿಣಾಮಗಳ ಕುರಿತು ನಾವು ತಲೆಕೆಡಿಸಿಕೊಳ್ಳಬಾರದು. ದೇಶಕ್ಕಾಗಿ ಏನು ಅಗತ್ಯವಿದೆಯೋ ಅದನ್ನು ನಾವು ಮಾಡಬೇಕು. ಇನ್ನು ಅದರಲ್ಲಿ ನಾನು , ನನ್ನ ಚಿತ್ರ, ಅದರ ನಷ್ಟ ಇತ್ಯಾದಿಗಳೆಲ್ಲಾ ಬಹಳ ಚಿಕ್ಕ ವಿಷಯ" ಎಂದು ಆಮಿರ್ ಹೇಳಿದ್ದಾರೆ. 

ಆಮಿರ್ ಗೆ ಮೊದಲು ಟ್ವೀಟ್ ಮಾಡಿದ ನಟ ಅರ್ಷದ್ ವಾರ್ಸಿ ಮಾತ್ರ ನೇರವಾಗಿ ಮೋದಿ ವಿರುದ್ಧ ಗುಡುಗಿದ್ದಾರೆ. " ನೀವು ನಿಮ್ಮ ಕುರ್ಚಿಯಲ್ಲಿ ಮಜಾ ಮಾಡಿ. ಆದರೆ ತೆರಿಗೆ ಕಟ್ಟುವ ಜನರ ಬದುಕಿನಲ್ಲಿ ಆಟವಾಡಬೇಡಿ " ಎಂಬರ್ಥ ಬರುವಂತೆ ಅವರು ಟೀಕಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News