ಹೊಸ ನೋಟಿನಲ್ಲಿ ಎರಡು ಸಾವಿರ ಎಂದು ಉರ್ದುವಿನಲ್ಲಿ ಬರೆದದ್ದು ಹೇಗೆ ಗೊತ್ತೇ?
Update: 2016-11-13 11:33 IST
ನ.13: ಚೆನ್ನೈ ಮೂಲದ ಉರ್ದು ಚಿಂತಕರೊಬ್ಬರು 2000 ರೂಪಾಯಿ ಹೊಸ ನೋಟಿನಲ್ಲಿ ದೋಷವನ್ನು ಪತ್ತೆ ಮಾಡಿದ್ದಾರೆ. ಹೊಸ ನೋಟಿನಲ್ಲಿ ಉರ್ದುವಿನಲ್ಲಿ ಬರೆದ ದೋ ಹಜಾರ್ ರುಪಾಯೆ ಎಂಬ ಬದಲಾಗಿ ದೋ ಬಜಾರ್ ರೂಪಾಯೆ ಎಂದು ಬರೆದಿರುವುದನ್ನು ಅವರು ಪತ್ತೆ ಮಾಡಿದ್ದಾರೆ.
2000 ರೂಪಾಯಿ ಹೊಸ ನೋಟಿನಲ್ಲಿ ಉರ್ದುವಿನಲ್ಲಿ ದೋ ಬಜಾರ್ ರುಪಾಯೆ ಎಂದು ಮುದ್ರಣಗೊಂಡಿದೆ. ಈ ಅಕ್ಷರ ತಪ್ಪಿನಿಂದಾಗಿ ಸಾವಿರ ಎಂಬ ಅರ್ಥದ ಪದ ಬಜಾರ್ ಅಥವಾ ಮಾರುಕಟ್ಟೆ ಎಂದಾಗಿದೆ ಎನ್ನುವ ಅಂಶವನ್ನು ಉರ್ದು ಚಿಂತಕ ಮತ್ತು ಲೆಕ್ಕಪರಿಶೋಧಕ ಯು.ಮಹ್ಮದ್ ಖಲೀಲುಲ್ಲಾ ಬೆಳಕಿಗೆ ತಂದಿದ್ದಾರೆ.
ಇದೀಗ ತಪ್ಪಾಗಿ ಮುದ್ರಿಸಿರುವುದರಿಂದ ಈ ನೋಟುಗಳು ಕಾನೂನುಬದ್ಧವಾಗಿ ಅಧಿಕೃತವೇ ಎನ್ನುವ ಪ್ರಶ್ನೆ ಸಹಜವಾಗಿಯೇ ಉದ್ಭವಿಸಿದೆ ಎಂದು ಅವರು ಹೇಳಿದ್ದಾರೆ.