×
Ad

ಮಜೀದಿ ಚಿತ್ರದಲ್ಲಿ ದೀಪಿಕಾ

Update: 2016-11-13 19:47 IST

ಬಾಲಿವುಡ್‌ನ ಬಹುಮುಖ ಪ್ರತಿಭೆಯ ನಟಿ ದೀಪಿಕಾ ಪಡುಕೋಣೆ ಪಾತ್ರಗಳಲ್ಲಿ ಸದಾ ಹೊಸತನವನ್ನು ಹುಡುಕುತ್ತಿರುತ್ತಾರೆ. ‘ಬಾಜಿರಾವ್ ಮಸ್ತಾನಿ’ಯಲ್ಲಿ ವೀರ ರಾಜಕುಮಾರಿಯ ಪಾತ್ರದಲ್ಲಿ ಕಾಣಿಸಿಕೊಂಡ ಈಕೆ, ಇನ್ನಷ್ಟೇ ತೆರೆಕಾಣಲಿರುವ ಹಾಲಿವುಡ್ ಚಿತ್ರವೊಂದರಲ್ಲಿ ಆ್ಯಕ್ಷನ್ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ, ಈಕೆ ಖ್ಯಾತ ಇರಾನಿ ನಿರ್ದೇಶಕ ಮಾಜಿದ್ ಮಜೀದಿ ನಿರ್ದೇಶಿಸಲಿರುವ ಚಿತ್ರವೊಂದರಲ್ಲಿ ಸಂಪೂರ್ಣವಾಗಿ ಗ್ಲಾಮರ್‌ರಹಿತ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮುಂಬೈನ ದೋಭಿಘಾಟ್‌ನಲ್ಲಿ ಇತ್ತೀಚೆಗೆ ಈ ಚಿತ್ರದ ಶೂಟಿಂಗ್‌ನ ಕೆಲವು ಸ್ಟಿಲ್‌ಗಳು ಆನ್‌ಲೈನ್‌ನಲ್ಲಿ ಪ್ರಸಾರವಾಗಿದ್ದು, ಅದರಲ್ಲಿ ದೀಪಿಕಾ ಕೆದರಿದ ಕೂದಲು ಹಾಗೂ ಮಾಸಿದ ಸೀರೆಯುಟ್ಟು ಪೇಲವವಾಗಿ ಕಾಣಿಸಿಕೊಂಡಿರುವುದು ಕಂಡು ಚಿತ್ರರಸಿಕರು ದಂಗಾಗಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ದೋಭಿ ಮಹಿಳೆಯ ಪಾತ್ರದಲ್ಲಿ ಅಭಿನಯಿಸುತ್ತಿ ದ್ದಾರೆಂಬ ಊಹಾಪೋಹಗಳು ಹರಿದಾಡುತ್ತಿವೆ. ಮುಂಬೈಯಲ್ಲದೆ ದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಕಾಶ್ಮೀರದಲ್ಲಿ ಚಿತ್ರದ ಕೆಲವು ಸನ್ನಿವೇಶಗಳು ಚಿತ್ರೀಕರಣಗೊಳ್ಳಲಿವೆ. ಇನ್ನೂ ಹೆಸರಿಡದ ಈ ಚಿತ್ರವು ಸಂಪೂರ್ಣವಾಗಿ ವಿಭಿನ್ನ ಕಥಾವಸ್ತುವನ್ನು ಹೊಂದಿದ್ದು, ಬಾಲಿವುಡ್‌ಗೆ ತೀರಾ ಹೊಸತಾಗಲಿದೆಯೆ ಎಂದು ನಿರ್ದೇಶಕ ಮಜೀದಿ ಹೇಳಿಕೊಂಡಿದ್ದಾರೆ. ಈ ಚಿತ್ರವು ದೀಪಿಕಾ ಅವರ ಸಿನೆಮಾ ಬದುಕಿನಲ್ಲೇ ಹೊಸ ಮೈಲುಗಲ್ಲಾಗಲಿದೆ ಎಂದಿದ್ದಾರೆ.
ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಬಿಗ್‌ಬಜೆಟ್ ಚಿತ್ರ ‘ಪದ್ಮಾವತಿ’ಯ ಜೊತೆಜೊತೆಗೆ ದೀಪಿಕಾ ಮಜೀದಿಯವರ ಚಿತ್ರದಲ್ಲೂ ಅಭಿನಯಿಸ ಲಿದ್ದಾರೆ. ಪದ್ಮಾವತಿ ಯಲ್ಲಿ ದೀಪಿಕಾ ಜೊತೆ ರಣವೀರ್‌ಸಿಂಗ್ ಹಾಗೂ ಶಾಹಿದ್ ಕಪೂರ್ ನಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News