ಸದ್ದು ಮಾಡುತ್ತಿರುವ ಉರ್ವಿ ಪೋಸ್ಟರ್

Update: 2016-11-13 15:06 GMT

‘ರಾಮಾ ರಾಮಾ ರೇ’ ಚಿತ್ರದ ಅದ್ಭುತ ಯಶಸ್ಸಿನ ಬಳಿಕ ಇದೀಗ ಇನ್ನೊಂದು ಚಿತ್ರವು ಬಿಡುಗಡೆಗೆ ಮುನ್ನವೇ ಸುದ್ದಿ ಮಾಡುತ್ತಿದೆ. ‘ಉರ್ವಿ’ ಎಂಬ ಹೆಸರಿನ ಈ ಚಿತ್ರದ ಪೋಸ್ಟರ್‌ನ ವಿಭಿನ್ನ ವಿನ್ಯಾಸವು ಸ್ಯಾಂಡಲ್‌ವುಡ್ ಚಿತ್ರಪ್ರೇಮಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಹೇಳಿಕೇಳಿ ನಾಯಕಿ ಪ್ರಧಾನ ಚಿತ್ರವಾದ ಉರ್ವಿಯಲ್ಲಿ ಶ್ರದ್ಧಾಶ್ರೀನಾಥ್, ಶ್ರುತಿ ಹರಿಹರನ್ ಹಾಗೂ ಶ್ವೇತಾ ಪಂಡಿತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬಹುಮುಖ ಪ್ರತಿಭೆಯ ನಟ ಅಚ್ಯುತರಾವ್ ಇಲ್ಲಿ ನೆಗೆಟಿವ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಕಲಾವಿದ ಡಾ.ಬಿ.ಕೆ.ಎಸ್.ವರ್ಮಾ ಅವರ ಪುತ್ರ ಪ್ರದೀಪ್ ವರ್ಮಾ, ಉರ್ವಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಾಗೆಯೇ ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವೂ ಹೌದು.

ದೀಪಾವಳಿಯಂದು ಬಿಡುಗಡೆಯಾದ ಚಿತ್ರದ ಪೋಸ್ಟರ್ ಬಗ್ಗೆ ಚಿತ್ರರಂಗದ ಸೆಲೆಬ್ರಿಟಿಗಳಿಂದ ಹಾಗೂ ಚಿತ್ರಪ್ರೇಮಿಗಳಿಂದ ಟ್ವೀಟರ್, ಫೇಸ್‌ಬುಕ್‌ಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಪ್ರಕಾಶ್ ರೈ, ಪವನ್‌ಕುಮಾರ್ ಮತ್ತಿತರ ಸಿನೆಮಾ ಗಣ್ಯರು, ಚಿತ್ರತಂಡದ ಟೀಂ ವರ್ಕ್ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ.

 ಸದ್ಯ ಉರ್ವಿ ಪೋಸ್ಟ್‌ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ವರ್ಷದ ಆರಂಭದ ವೇಳೆಗೆ ಬಿಡುಗಡೆಗೆ ಸನ್ನದ್ಧವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News