ಶರೀಅತ್ ವಿಷಯದಲ್ಲಿ’ಸಮಸ್ತ’ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಜೊತೆ ನಿಲ್ಲಲಿದೆ: ಆಲಿಕುಟ್ಟಿ ಮುಸ್ಲಿಯಾರ್
Update: 2016-11-14 12:32 IST
ಪಟ್ಟಾಂಬಿ, ನ. 14: ಶರೀಅತ್ ಸಂರಕ್ಷಣೆ ವಿಷಯದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ತೀರ್ಮಾನಕ್ಕೆ ಬದ್ಧವಾಗಿರುತ್ತದೆ ಎಂದು ಅದರ ಪ್ರಧಾನಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಹೇಳಿದ್ದಾರೆ ಎಂದು ವರದಿಯಾಗಿದೆ. ಅವರು, ವಿಳಯೂರಿನಲ್ಲಿ ಪತ್ರಕರ್ತರೊಂದಿಗೆ ಮಾತಾಡುತ್ತಿದ್ದರು.
ನವೆಂಬರ್ 19,20 ತಾರೀಕುಗಳಲ್ಲಿ ಕೊಲ್ಕತಾದಲ್ಲಿ ನಡೆದ ವೈಯಕ್ತಿಕ ಕಾನೂನು ಬೋರ್ಡ್ ಸಭೆಯಲ್ಲಿ ನಂತರ ತೆಗೆದುಕೊಳ್ಳುವ ತೀರ್ಮಾನಗಳೊಂದಿಗೆ ಸಹಕರಿಸಲಾಗುವುದು. ಮುಸ್ಲಿಮರು ಒಗ್ಗಟ್ಟಿನಲ್ಲಿ ನಿಲ್ಲಬೇಕಾದ ಸಮಯವಿದು. ಒಗ್ಗಟ್ಟಿಗೆ ವಿರುದ್ಧವಾಗಿರುವುದರಲ್ಲಿ ನಮಗೆ ಸಹಮತವಿಲ್ಲ ಎಂದು ಅವರು ಹೇಳಿದ್ದಾರೆಂದು ವರದಿ ತಿಳಿಸಿದೆ.