ಮಲಪ್ಪುರಂ,ಕೊಲ್ಲಂ ಕೋರ್ಟು ಸ್ಫೋಟ: ತಮಿಳ್ನಾಡಿನ ವ್ಯಕ್ತಿ ಆರೋಪಿ ?
Update: 2016-11-14 12:36 IST
ಕೊಲ್ಲಂ,ನ. 14: ಮಲಪ್ಪುರಂ ಮತ್ತು ಕೊಲ್ಲಂ ಕೋರ್ಟು ವರಾಂಡದಲ್ಲಿ ಸ್ಫೋಟ ನಡೆಸಿದ ಆರೋಪಿಯ ಕುರಿತು ಪೊಲೀಸರಿಗೆ ವಿವರಗಳ ಲಭಿಸಿದ್ದು ಮೊಬೈಲ್ ಫೋನ್ ನಂಬರ್ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ಸದ್ರಿ ಆರೋಪಿ ತಮಿಳ್ನಾಡಿನ ವಿಲ್ಲುಪುರಂ ಎಂಬಲ್ಲಿ ನಿವಾಸಿಯಾಗಿದ್ದಾನೆಂದು ತಿಳಿದು ಬಂದಿದೆ ಎಂದು ವರದಿಯಾಗಿದೆ.
ಕೇರಳದಲ್ಲಿಮಾತ್ರವಲ್ಲ ಆಂಧ್ರ ಚಿತ್ತೂರ್, ಕರ್ನಾಟಕದ ವೈಸೂರಿನ ಕೋರ್ಟು ಪ್ರಾಂಗಣದಲ್ಲಿಯೂ ಸಮಾನ ರೀತಿಯ ಸ್ಫೋಟನ ನಡೆದಿತ್ತು. ನಾಲ್ಕು ಸ್ಥಳಗಳ ಟವರ್‌ಗಳ ವ್ಯಾಪ್ತಿಯಲ್ಲಿ ಒಂದೇ ಮೊಬೈಲ್ ಫೋನ್ ನಂಬರ್ ಇತ್ತು ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ಸ್ಫೋಟದ 36 ಗಂಟೆಗಳೊಳಗೆ ಫೋನ್ ಎಲ್ಲ ಸ್ಥಳಗಳಲ್ಲಿ ಇತ್ತು. ಇನ್ನೂರಕ್ಕೂ ಅಧಿಕ ಸಿಂ ಕಾರ್ಡ್‌ಗಳನ್ನು ಈತ ಉಪಯೋಗಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಶಂಕಿತ ಆರೋಪಿ ಪೊಲೀಸರ ವಶದಲ್ಲಿದ್ದಾನೆ ಎಂದು ಕೂಡಾ ಸೂಚನೆ ಲಭಿಸಿದೆಯೆಂದು ವರದಿ ತಿಳಿಸಿದೆ.