ನೋಟಿನ ಸಂಕಟ: ಹರಕೆ ಡಬ್ಬಿ ಒಡೆದ ಚರ್ಚು
Update: 2016-11-14 14:49 IST
ಆಲುವ,ನ. 14: ಚರ್ಚ್‌ನ ಅಧಿಕಾರಿಗಳು ಚಿಲ್ಲರೆ ಇಲ್ಲದೆ, ಹರಕೆ ಡಬ್ಬಿ ತೆರೆದು ಹಣತೆಗೆದ ಘಟನೆ ವರದಿಯಾಗಿದೆ. ಕೇರಳದ ಪುಕಾಟ್ಟುಪಡಿ ತೆವಕ್ಕಲ್ ಸೈಂಟ್ ಮಾರ್ಟಿನ್ ಚರ್ಚ್ ಅಧಿಕಾರಿಗಳು ಅಗತ್ಯ ವಸ್ತುಗಳ ಖರೀದಿಗೂ ಹಣವಿಲ್ಲದ ಸ್ಥಿತಿ ನಿರ್ಮಾಣವಾದ್ದರಿಂದ ಚರ್ಚ್‌ನ ಹುಂಡಿಯನ್ನು ತೆರೆಯಲು ತೀರ್ಮಾನಿಸಿದರು ಎನ್ನಲಾಗಿದೆ.
ರವಿವಾರ ಸೈಂಟ್‌ಮಾರ್ಟಿನ್ ಚರ್ಚ್ ಮುಖ್ಯಸ್ಥ ಫಾ. ಜಿಮ್ಮಿ ಪೂಚಕ್ಕಾಡ್‌ರ ಪ್ರಕಟಣೆ ಆಲಿಸಿದವರು ಮೊದಲು ಚಕಿತರಾಗಿದ್ದರು. ಹುಂಡಿಯಿಂದ ಅವಶ್ಯವಿದ್ದವರು ಹಣಪಡೆದು ನಂತರ ಮರಳಿಸಿದರೆ ಸಾಕು ಎಂದು ಅವರು ಸೂಚನೆ ನೀಡಿದ್ದರು. ಚಿಲ್ಲರೆ ಇಲ್ಲದೆ ಕಷ್ಟಪಡುತ್ತಿರುವವರಿಗೆ ಇದು ಸಹಾಯಕವೂ ಆಗಿದೆ. ಹತ್ತು, ಐವತ್ತು ನೂರು ರೂಪಾಯಿಯ ನೋಟುಗಳನ್ನು ಅಗತ್ಯವಿರುವವರು ಪಡೆದುಕೊಂಡಿದ್ದಾರೆ. ಐನೂರು ರೂಪಾಯಿಯ ನೋಟುಗಳು ಮಾತ್ರ ಹುಂಡಿಯಲ್ಲೇ ಉಳಿದು ಕೊಂಡಿದ್ದವು ಎಂದು ವರದಿ ತಿಳಿಸಿದೆ.