×
Ad

ಜನರ ಖಾತೆಗೆ 15 ಲಕ್ಷ ಹಾಕದಿದ್ದರೆ ಏನು ಮಾಡುತ್ತಾರೆ ಗೊತ್ತೇ ?

Update: 2016-11-14 15:51 IST

ಪಾಟ್ನಾ,ನ. 14 : ಕೇಂದ್ರ ಸರಕಾರ ಹಳೆಯ 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿರುವ ಬಗ್ಗೆ ಇಲ್ಲಿಯ ತನಕ ಮೌನಧಾರಣೆ ಮಾಡಿದ್ದ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಇದೀಗ ತಮ್ಮ ಮೌನ ಮುರಿದಿದ್ದು, 50 ದಿನಗಳ ನಂತರ ಪ್ರಧಾನಿ ತಾವು ಚುನಾವಣೆಗಿಂತ ಮೊದಲು ಆಶ್ವಾಸನೆ ನೀಡಿದಂತೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುತ್ತಾರೇನು ?, ಎಂದು ಟ್ವೀಟ್ ಮುಖಾಂತರ ಪ್ರಶ್ನಿಸಿದ್ದಾರೆ.

ಇಲ್ಲದೇ ಹೋದಲ್ಲಿ ಇದನ್ನು ‘ಸರ್ಜಿಕಲ್ ಸ್ಟ್ರೈಕ್’ ಹಾಗೂ ಜನರ ‘ನಕಲಿ ಎನ್ ಕೌಂಟರ್’ಎಂದುಹೇಳಬೇಕಾಗುತ್ತದೆ’’ ಎಂದು ತಮ್ಮ ಸರಣಿ ಟ್ವೀಟುಗಳಲ್ಲಿ ಲಾಲು ಹೇಳಿಕೊಂಡಿದ್ದಾರೆ.

‘‘ತಾನು ಕಪ್ಪು ಹಣದ ವಿರೋಧಿಯಾಗಿದ್ದರೂ ಇಂತಹ ಒಂದುಯೋಜನೆ ಜಾರಿಗೊಳಿಸುವಾಗ ಸರಕಾರ ದೂರದರ್ಶಿ ನಿಲುವು ಹೊಂದಿಲ್ಲವೆಂದು ಹೇಳಬೇಕಾಗುತ್ತದೆ. ಸರಕಾರ ಜನರಿಗಾಗುತ್ತಿರುವ ಅನಾನುಕೂಲತೆಗಳನ್ನು ಅರಿಯಬೇಕಿತ್ತು,’’ ಎಂದು ಲಾಲು ಹೇಳಿದರು.

ಬ್ಯಾಂಕುಗಳಿಂದ ಹಲವು ಲಕ್ಷ ಕೋಟಿಯಷ್ಟು ಹಣ ಪಡೆದು ಅವುಗಳನ್ನು ಹಿಂದಕ್ಕೆ ನೀಡದವರ ವಿರುದ್ಧ ಯಾವ ಕ್ರಮವನ್ನು ಮೋದಿ ಸರಕಾರ ಕೈಗೊಂಡಿದೆ ಎಂದು ಲಾಲು ಪ್ರಶ್ನಿಸಿದರು. ಬ್ಯಾಂಕುಗಳ ಸಾಲ ಹಿಂದಿರುಗಿಸದ ಉದ್ಯಮಿಗಳ ಪಟ್ಟಿಯನ್ನು ಪ್ರಧಾನಿ ನೀಡಬೇಕೆಂದು ಆಗ್ರಹಿಸಿದ ಲಾಲು ಸಾಲ ಹಿಂಪಡೆಯಲು ಸರಕಾರ ಕೈಗೊಂಡ ಕ್ರಮಗಳ ಬಗ್ಗೆಯೂ ವಿವರಣೆ ಕೋರಿದರು.

ಸರಕಾರ 2000 ರೂ. ಹೊಸ ನೋಟನ್ನು ಬಿಡುಗಡೆಗೊಳಿಸಿರುವ ಹಿಂದಿನ ಮರ್ಮವನ್ನು ಪ್ರಶ್ನಿಸಿದ ಲಾಲು, ಸರಕಾರಕ್ಕೆ ನಿಜವಾಗಿಯೂ ಭ್ರಷ್ಟಾಚಾರ ಹಾಗೂ ಕಪ್ಪು ಹಣವನ್ನು ಸಮಾಜದಿಂದ ಹೊಡೆದೋಡಿಸಬೇಕೆಂಬ ಮನಸ್ಸಿದ್ದರೆ ಅದು 2000 ರೂ, ನೋಟನ್ನು ಏಕೆ ಬಿಡುಗಡೆಗೊಳಿಸಿದೆಯೆಂಬ ಇನ್ನೊಂದು ಪ್ರಶ್ನೆಯನ್ನು ಸರಕಾರದತ್ತ ಎಸೆದಿರುವ ಲಾಲು ಪ್ರಸಾದ್ ‘‘ಜನರಿಗೆ ಈ ಬಗ್ಗೆ ಸಂಶಯಗಳಿವೆ,’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News