ಭಾರತದ ಸೇನಾ ದಾಳಿಗೆ ಪಾಕ್‌ನ ಏಳು ಸೈನಿಕರು ಹತ
Update: 2016-11-14 16:42 IST
ಇಸ್ಲಾಮಾಬಾದ್, ನ.14: ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ಸೇನೆ ನಡೆಸಿದ ಗುಂಡಿನ ದಾಳಿಗೆ ನಮ್ಮ ದೇಶದ ಕನಿಷ್ಠ ಏಳು ಸೈನಿಕರು ಹತರಾಗಿದ್ದಾರೆ ಎಂದು ಪಾಕಿಸ್ತಾನದ ಸೇನೆ ಸೋಮವಾರ ಹೇಳಿದೆ.
ಕಳೆದ ರಾತ್ರಿ ಕದನ ವಿರಾಮ ಉಲ್ಲಂಘಿಸಿರುವ ಭಾರತೀಯ ಸೇನೆ ಎಲ್‌ಒಸಿಯ ಭಿಂಬರ್ ಸೆಕ್ಟರ್‌ನಲ್ಲಿ ಏಳು ಪಾಕಿಸ್ತಾನದ ಸೈನಿಕರನ್ನು ಸಾಯಿಸಿದೆ ಎಂದು ಪಾಕ್ ಸೇನೆ ಪ್ರಕಟನೆಯಲ್ಲಿ ತಿಳಿಸಿದೆ.
ಭಾರತದ ಅಪ್ರಚೋದಿತ ದಾಳಿಗೆ ಪಾಕಿಸ್ತಾನಿ ಸೈನಿಕರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದು ಪಾಕ್ ಸೇನೆ ಹೇಳಿದೆ.
ಪಾಕಿಸ್ತಾನ ಈ ತನಕ ಎಲ್‌ಒಸಿಯಲ್ಲಿ ನಡೆಸಿರುವ ಅಪ್ರಚೋದಿತ ಗುಂಡಿನ ದಾಳಿಗೆ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಪಶುವಾಗಿದ್ದಾರೆ.