ಭಾರತದ ಅತ್ಯಂತ ಕಡಿಮೆ ಬೆಲೆಯ ಪೋರ್ಶ್ ಕಾರು ಬಿಡುಗಡೆ
Update: 2016-11-15 14:57 IST
ಹೊಸದಿಲ್ಲಿ,ನ.15: ಪೋರ್ಶ್ ತನ್ನ ಮೆಕಾನ್ ಆರ್4 ಎಸ್‌ಯುವಿ ಅನ್ನು ಭಾರತಮಾರುಕಟ್ಟೆಗೆ ಮಂಗಳವಾರ ಬಿಡುಗಡೆಗೊಳಿಸಿದ್ದು, ದಿಲ್ಲಿಯಲ್ಲಿ ಇದರ ಶೋರೂಮ್ ಬೆಲೆ 76.84 ಲಕ್ಷ ರೂ.ಗಳಾಗಿವೆ. ಇದು ದೇಶದಲ್ಲಿ ಖರೀದಿಸಬಹುದಾದ ಪೋರ್ಶ್‌ನ ಅತ್ಯಂತ ಅಗ್ಗದ ವಾಹನವಾಗಿದೆ! ಎಸ್ ಡೀಸೆಲ್,ಟರ್ಬೋ ಮತ್ತು ಪರ್ಫಾರ್ಮನ್ಸ್ ಪ್ಯಾಕೇಜ್ ಜೊತೆ ಟರ್ಬೋದ ಬಳಿಕ ಇದು ಭಾರತದಲ್ಲಿ ಬಿಡುಗಡೆಯಾಗಿರುವ ನಾಲ್ಕನೇ ಮೆಕಾನ್ ಆವೃತ್ತಿಯಾಗಿದೆ.
ಇತರ ಎಲ್ಲ ಪೋರ್ಶ್ ಕಾರುಗಳಂತೆ ಮೆಕಾನ್ ಆರ್4 ನೇರ ಆಮದು ಮಾರ್ಗದ ಮೂಲಕ ಭಾರತಕ್ಕೆ ಬರುತ್ತದೆ. ಬೆಲೆಗೆ ಹೋಲಿಸಿದರೆ ಇದು ಇತ್ತೀಚಿನ ಜಾಗ್ವಾರ್ ಎಫ್-ಪೇಸ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ. ಆದರೆ ಜಾಗ್ವಾರ್ ಡೀಸೆಲ್ ಮಾದರಿಯಲ್ಲಿ ಮಾತ್ರ ಲಭ್ಯವಿರುವುದರಿಂದ ಮೆಕಾನ್ ಆರ್4 ಪೆಟ್ರೋಲ್ ಚಾಲಿತ ಮರ್ಸಿಡಿಸ್ ಬೆಂಝ್ ಜಿಎಲ್‌ಇ 400 4ಮ್ಯಾಟಿಕ್ ಕಾರಿಗೆ(ದಿಲ್ಲಿಯಲ್ಲಿ 74.9 ಲ.ರೂ.) ಮುಖ್ಯ ಪ್ರತಿಸ್ಪರ್ಧಿ ಎನ್ನಬಹುದು.