×
Ad

ಜನಾರ್ದನ ರೆಡ್ಡಿಗೆ ಮದುವೆ ಖರ್ಚಿಗೆ ಅಷ್ಟೊಂದು 2000 ರೂ. ಹೊಸ ನೋಟು ಎಲ್ಲಿಂದ ಬಂತು ?

Update: 2016-11-15 16:45 IST

ಹೊಸದಿಲ್ಲಿ, ನ.16: 500, 1000 ರೂ. ನೋಟು ರದ್ದತಿ ಬಗ್ಗೆ ಈಗಾಗಲೇ ತೀವ್ರ ಟೀಕೆ ವ್ಯಕ್ತಪಡಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಂಗಳವಾರ ದಿಲ್ಲಿ ವಿಧಾನಸಭೆಯಲ್ಲಿ ಪ್ರಧಾನಿ  ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
‘‘ದೇಶದ ಬಹುಸಂಖ್ಯಾತ ಬಡವರನ್ನು ಬ್ಯಾಂಕ್‌ಗಳ, ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಿಸಿರುವ ಪ್ರಧಾನಿ ಮೋದಿಯವರು ದೊಡ್ಡ ದೊಡ್ಡ ಮೊತ್ತದ ಕಪ್ಪು ಹಣ ಹೊಂದಿರುವ ಬಾರಿ ಕುಳಗಳ ವಿರುದ್ಧ ಯಾವುದೇ ಕ್ರಮ ಜರಗದಂತೆ ನೋಡಿಕೊಂಡಿದ್ದಾರೆ. ಈ ಭಾರೀ ಕುಳಗಳು ಮೋದಿಯವರ ಆಪ್ತ ಮಿತ್ರರಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗಳ ಮದುವೆ ನಾಳೆಯಿಂದ ನಡೆಯಲಿದೆ. 3-4 ದಿನಗಳ ಈ ಮದುವೆ ಕಾರ್ಯಕ್ರಮಕ್ಕೆ 500 ಕೋ.ರೂ. ಖರ್ಚು ಮಾಡಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ 2000 ರೂ. ಹೊಸ ನೋಟುಗಳು ಜನಾರ್ದನ ರೆಡ್ಡಿಗೆ ಎಲ್ಲಿಂದ ಬಂದವು’’ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News