×
Ad

ಒಂದೇ ಸಂಸ್ಥೆಯಿಂದ ಭಾರತ ಮತ್ತು ಪಾಕ್‌ಗೆ ನೋಟುಗಳ ಮಸಿ, ಬೆಳ್ಳಿದಾರ ಪೂರೈಕೆ: ಉವೈಸಿ

Update: 2016-11-16 00:25 IST

ಹೈದರಾಬಾದ್,ನ.15: ಭಾರತ ಮತ್ತು ಪಾಕಿಸ್ತಾನಗಳಿಗೆ ನೋಟು ತಯಾರಿಕೆಯಲ್ಲಿ ಬಳಸುವ ಮಸಿ ಮತ್ತು ಬೆಳ್ಳಿಯ ದಾರಗಳನ್ನು ಒಬ್ಬರೇ ಪೂರೈಕೆ ಮಾಡುತ್ತಿದ್ದು, ಇದು ನಕಲಿ ಭಾರತೀಯ ಕರೆನ್ಸಿ ತಯಾರಿಕೆಗೆ ಅವಕಾಶ ಕಲ್ಪಿಸುವ ಅಪಾಯವಿದೆ. ಇದನ್ನು ಎದುರಿಸಲು ಸರಕಾರದ ಕಾರ್ಯತಂತ್ರವೇನು ಎಂದು ಎಐಎಂಐಎಂ ವರಿಷ್ಠ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ಅವರು ಇಂದಿಲ್ಲಿ ಪ್ರಶ್ನಿಸಿದರು.

 ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರದ ನೋಟು ನಿಷೇಧ ಕ್ರಮವು ಪ್ರತಿ ಯೊಬ್ಬರಿಗೂ ತೀವ್ರ ಸಮಸ್ಯೆಗಳನ್ನುಂಟು ಮಾಡಿದೆ ಎಂದು ಪ್ರತಿಪಾದಿಸಿದರು. ಜನರು ತಮ್ಮ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯಿಸಿಕೊಳ್ಳಲು ಸರಕಾರವು ಕನಿಷ್ಠ ಎರಡು ತಿಂಗಳು ಕಾಲಾವಕಾಶವನ್ನು ನೀಡಬೇಕು. ಯಾರಾದರೂ ದೊಡ್ಡ ಮೊತ್ತವನ್ನು ಬ್ಯಾಂಕಿಗೆ ಜಮಾ ಮಾಡಿದರೆ ಅದನ್ನು ಖಂಡಿತ ವಾಗಿಯೂ ಪತ್ತೆ ಹಚ್ಚಬಹುದಾಗಿದೆ ಎಂದರು.
 ಫಿಲಿಪ್ಪೀನ್ಸ್,ಯುರೋಪ್ ಮುಂತಾದಡೆ ಇಂತಹ ಕ್ರಮಗಳನ್ನು ಕೈಗೊಂಡಿದ್ದಾಗ ಜನರಿಗೆ ಸಾಕಷ್ಟು ಸಮಯವನ್ನು ನೀಡಲಾಗಿತ್ತು. ಹೀಗೆ ಸಾಕಷ್ಟು ಸಮಯಾವಕಾಶ ನೀಡುವುದು ವಿವಿಧ ರಾಷ್ಟ್ರಗಳಲ್ಲಿ ನಿಯಮವೇ ಆಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News