×
Ad

ಮೋದಿ ಸರಕಾರದಿಂದ ಜನ ಭಿಕ್ಷುಕರಾಗುತ್ತಿದ್ದಾರೆ

Update: 2016-11-16 00:25 IST

 ಕೋಲ್ಕತಾ, ನ.15: 1 ಸಾವಿರ ರೂ. ಹಾಗೂ 500 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ಮೂಲಕ ಮೋದಿ ಸರಕಾರವು ದೇಶದ ಜನತೆಯನ್ನು ಭಿಕ್ಷುಕರನ್ನಾಗಿ ಮಾಡಲು ಹೊರಟಿದ್ದಾರೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಕಿಡಿಕಾರಿದ್ದಾರೆ. ಇತರ ಪಕ್ಷಗಳು ತನ್ನೊಂದಿಗೆ ಕೈಜೋಡಿಸಲಿ ಅಥವಾ ಬಿಡಲಿ, ತಾನಂತೂ ಈ ವಿಷಯವಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಭೇಟಿಯಾಗುವುದಾಗಿ ಆಕೆ ತಿಳಿಸಿದ್ದಾರೆ.

  ‘‘ನೋಟುಗಳನ್ನು ಅಮಾನ್ಯಗೊಳಿಸಿರುವ ಬಗ್ಗೆ ನಾಳೆ ನಾನು, ನನ್ನ ಪಕ್ಷದ 40 ಸಂಸದರೊಂದಿಗೆ ರಾಷ್ಟ್ರಪತಿಯನ್ನು ಭೇಟಿಯಾಗಲಿದ್ದೇನೆ. ಈ ಬಗ್ಗೆ ರಾಹುಲ್ ಗಾಂಧಿ, ನಿತೀಶ್ ಕುಮಾರ್, ನವೀನ್ ಪಟ್ನಾಯಕ್, ಮುಲಾಯಂ ಸಿಂಗ್ ಯಾದವ್ ಹಾಗೂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ಜೊತೆ ಮಾತನಾಡಿದ್ದೇನೆ’’ ಎಂದವರು ಹೇಳಿದ್ದಾರೆ.
ಹೊಸದಿಲ್ಲಿಗೆ ನಿರ್ಗಮಿಸುವ ಮುನ್ನ ಕೋಲ್ಕತಾ ವಿಮಾನನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಒಂದು ವೇಳೆ ಈ ನಾಯಕರ್ಯಾರೂ ಬಾರದೆ ಇದ್ದಲಿ ತನ್ನ ಪಕ್ಷದ ಸಂಸದರೊಂದಿಗೆ ಒಬ್ಬಳೇ ಹೋಗುವುದಾಗಿ ತಿಳಿಸಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ತನ್ನ ಜೊತೆ ಕೈಜೋಡಿಸುವ ಸಾಧ್ಯತೆಯಿದೆಯೆಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News