2000 ನೋಟಿನ ಕಲರ್ ಜೆರಾಕ್ಸ್ ಪ್ರತಿ ನೀಡಿ ಮದ್ಯ ಖರೀದಿಗೆ ಯತ್ನಿಸಿದ ವೃದ್ದ..!
ಜೈಪುರ, ನ. 16: ಝುಂಜುನು ಜಿಲ್ಲೆಯ ಚಿರವಾದಲ್ಲಿ ನೂತನವಾಗಿ ಹೊಸ ಎರಡು ಸಾವಿರ ರೂಪಾಯಿ ನೋಟಿನ ಕಲರ್ ಜೆರಾಕ್ಸ್ ಪ್ರತಿ ನೀಡಿ ಮದ್ಯ ಖರೀಸಲು ಯತ್ನಿಸಿದ 60ರ ಹರೆಯದ ವೃದ್ದನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಲಾಲ್ ಸಿಂಗ್ ಎಂಬಾತನು ಮದ್ಯದಂಗಡಿಗೆ ಹೋಗಿ 2000 ನೋಟಿನ ಕಲರ್ ಜೆರಾಕ್ಸ್ ಪ್ರತಿ ನೀಡಿ ಮದ್ಯನೀಡುವಂತೆ ಅಗ್ರಹಿಸಿದ ಎನ್ನಲಾಗಿದೆ. ಆರಂಭದಲ್ಲಿ ಸೇಲ್ಸ್‌ಮ್ಯಾನ್ ಆತ ನೀಡಿದ ನೋಟ್ ನ ಪ್ರತಿಯನ್ನು ನಗದು ಕ್ಯಾಶ್ ಬಾಕ್ಸ್ ನಲ್ಲಿಟ್ಟು ಸ್ವಲ್ಪ ಕಾಯುವಂತೆ ಸೂಚಿಸಿದ ಎನ್ನಲಾಗಿದೆ. ವೃದ್ದ ಗಲಾಟೆ ಮಾಡಿದಾಗ ಸೆಲ್ಸ್ ಮ್ಯಾನ್ ನೋಟನ್ನು ಪರಿಶೀಲಿಸಿದಾಗ ಅದು ಖೋಟಾ ನೋಟು ಎನ್ನುವ ವಿಚಾರ ಗಮನಕ್ಕೆ ಬಂತು. ತಕ್ಷಣ ಆತ ಪೊಲೀಸರಿಗೆ ಮಾಹಿತಿ ನೀಡಿದ ಎಂದು ತಿಳಿದು ಬಂದಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಪ್ರಶ್ನಿಸಿದಾಗ ಆತನಿಗೆ ಒಬ್ಬರು ನೋಟ್ ನ ಪ್ರತಿ ನೀಡಿ ಒಂದು ಕ್ವಾರ್ಟರ್ ವಿಸ್ಕಿ ತರುವಂತೆ ಹೇಳಿರುವುದಾಗಿ ಮಾಹಿತಿ ನೀಡಿದ್ದಾನೆ. ಇದೀಗ ವೃದ್ದ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾನೆ.