ರೈಲು ಢಿಕ್ಕಿ: ಇಬ್ಬರು ಮಹಿಳೆಯರ ಮೃತ್ಯು
Update: 2016-11-16 12:15 IST
ಚಾಲಕ್ಕುಡಿ, ನವೆಂಬರ್ 16: ಚಾಲಕ್ಕುಡಿ ರೈಲ್ವೆ ನಿಲ್ದಾಣದಲ್ಲಿ ರೈಲು ಢಿಕ್ಕಿಯಿಂದ ಇಬ್ಬರು ಮಹಿಳೆಯರು ಮೃತರಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು, ವಡಕ್ಕೊಪರದ ತಂಗಪ್ಪನ್ ಪಿಳ್ಳೆ ಪತ್ನಿ ಪೊನ್ನಮ್ಮ(62), ತೆಕ್ಕೊಕರ ಜಯಕೃಷ್ಣ ಭವನದ ಬಾಲಕೃಷ್ಣ ಪಿಳ್ಳೆಯ ಪತ್ನಿ ರಾಜೀವಿ(42) ಎಂದು ಗುರುತಿಸಲಾಗಿದೆ.. ರೈಲು ನಿಲ್ದಾಣದಲ್ಲಿ ರೈಲಿಂದಿಳಿದು ಹಳಿದಾಟುವ ವೇಳೆಅಪಘಾತ ಸಂಭವಿಸಿದ್ದು, ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಮೃತ ಮಹಿಳೆಯರು ಬಂದಿದ್ದರು ಎಂದುವರದಿ ತಿಳಿಸಿದೆ.