×
Ad

ನಗದು ಕೊರತೆಯಿಂದ ಉ.ಪ್ರದೇಶದಲ್ಲಿ 28 ಜನರ ಆತ್ಮಹತ್ಯೆ:ಶಿವಪಾಲ್ ಯಾದವ

Update: 2016-11-16 22:12 IST

ಲಕ್ನೋ,ನ.16: ನೋಟು ನಿಷೇಧದ ಬಳಿಕ ಉ.ಪ್ರದೇಶದಲ್ಲಿ ನಗದು ಹಣದ ಕೊರತೆಯಿಂದಾಗಿ 28 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಬುಧವಾರ ಇಲ್ಲಿ ಪ್ರತಿಪಾದಿಸಿದ ಎಸ್‌ಪಿ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ ಅವರು,ಕೇಂದ್ರದ ಕ್ರಮವು ‘ಅನಿಶ್ಚಿತತೆಯ ’ವಾತಾವರಣವನ್ನು ಸೃಷ್ಟಿಸಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಜನಸಾಮಾನ್ಯರು ಮತ್ತು ಕೃಷಿಕರು ಎದುರಿಸುತ್ತಿರುವ ವ್ಯಾಪಕ ಸಮಸ್ಯೆಗಳನ್ನು ಪರಿಶೀಲಿಸಬೇಕಿದೆ ಎಂದರು. ಹತಾಶರಾಗದಂತೆ ತಾನು ರಾಜ್ಯದ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಟ್ವೀಟಿಸಿರುವ ಅವರು, ತನ್ನ ಪಕ್ಷವು ಅವರೊಂದಿಗಿದೆ. ಬಡ ದಿನಗೂಲಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಅವರು ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲ. ಅವರ ದಿನದ ಬದುಕು ನಗದು ಹಣವನ್ನೇ ಅವಲಂಬಿಸಿದೆ. ಸರಕಾರದ ಕ್ರಮ ಅವರ ಭವಿಷ್ಯವನ್ನು ಕತ್ತಲನ್ನಾಗಿಸಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News