ಕೇರಳ ಎಸೆಸೆಲ್ಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ
ತಿರುವನಂತಪುರಂ, ನ. 17: ಮುಂದಿನ ವರ್ಷ ಮಾರ್ಚ್‌ನಲ್ಲಿ ನಡೆಯಲಿರುವ ಕೇರಳ ಎಸೆಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಬದಲಾವಣೆಯಾಗಿದೆ. ಸಾರ್ವಜನಿಕ ಶಿಕ್ಷಣ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಷ್ಕೃತ ವೇಳಾ ಪಟ್ಟಿಯ ಕುರಿತು ತೀರ್ಮಾನಕ್ಕೆ ಬರಲಾಗಿದೆ ಎಂದು ವರದಿಯಾಗಿದೆ.
ಹೊಸ ವೇಳಾಪಟ್ಟಿ ಪ್ರಕಾರ ಮಾರ್ಚ್ ಎಂಟಕ್ಕೆ ಆರಂಭಗೊಳ್ಳುವ ಪರೀಕ್ಷೆ ಮಾರ್ಚ್ 27ಕ್ಕೆ ಕೊನೆಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಊರ್ಜ ತಂತ್ರಂ(ಫಿಸಿಕ್ಸ್), ರಸತಂತ್ರಂ(ರಸಾಯನಶಾಸ್ತ್ರ,ಕೆಮೆಸ್ಟ್ರಿ), ಸಾಮೂಹಿಕ ಶಾಸ್ತ್ರಂ( ಸಮಾಜ ವಿಜ್ಞಾನ) ಪರೀಕ್ಷೆಗಳ ಮುಂಚಿನದಿನ ರಜೆನೀಡಲು ನಿರ್ಧರಿಸಲಾಗಿದೆ. ಈ ಹಿಂದೆ ಊರ್ಜತಂತ್ರಂ(ಫಿಸಿಕ್ಸ್) ಪರೀಕ್ಷೆಯನ್ನು ಮಾರ್ಚ್ 21ಕ್ಕೆ ನಿರ್ಧರಿಸಲಾಗಿತ್ತು .ಅದನ್ನು ಮಾರ್ಚ್ ಹದಿನಾರಕ್ಕೆ ಬದಲಾಯಿಸಲಾಗಿದೆ. ಮಾರ್ಚ್ 21ಕ್ಕೆ ಪರೀಕ್ಷೆ ಇರುವುದಿಲ್ಲ. ಮಾರ್ಚ್16ಕ್ಕೆ ನಡೆಯಬೇಕಾಗಿದ್ದ ಸಾಮೂಹಿಕ(ಸಮಾಜ ವಿಜ್ಞಾನ,ಸೋಶಿಯಲ್ ಸಯನ್ಸ್) ಶಾಸ್ತ್ರಂ ಪರೀಕ್ಷೆ 27 ನೆ ತಾರೀಕಿಗೆ ಬದಲಾಯಿಸಲಾಗಿದೆ. ಪರೀಕ್ಷಾ ಮಧ್ಯಾಹ್ನದ ಬಳಿಕ 1.45ಕ್ಕೆ ಆರಂಭವಾಗಲಿದೆ ಎಂದು ವರದಿ ತಿಳಿಸಿದೆ.