×
Ad

500 ರೂ, 1,000 ರೂ. ನೋಟುಗಳ ನಿಷೇಧ: ಮಮತಾ ನೇತೃತ್ವದಲ್ಲಿ ರಾಷ್ಟ್ರಪತಿ ಭವನಕ್ಕೆ ಪ್ರತಿಭಟನಾ ರ‍್ಯಾಲಿ

Update: 2016-11-17 13:03 IST

ಹೊಸದಿಲ್ಲಿ, ನ.17: ಐನೂರು ಮತ್ತು ಒಂದು ಸಾವಿರ ನೋಟು ನಿಷೇಧ ವಿರುದ್ಧ ಸಮರ ಸಾರಿರುವ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ನಿಯೋಗವೊಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿಯಾಗಿ ನಿರ್ಧಾರವನ್ನು ಹಿಂಪಡೆಯಲು ಮನವಿ ಮಾಡಿದೆ.
ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ, ಆಮ್‌ ಆದ್ಮಿ ಪಕ್ಷ, ಬಿಜೆಪಿಯ ಮಿತ್ರಪಕ್ಷ ಶಿವಸೇನೆ, ನ್ಯಾಶನಲ್‌ ಕಾನ್ಸರೆನ್ಸ್ ಪಕ್ಷ ಮತ್ತು ಹಾರ್ದಿಕ್‌ ಪಟೇಲ್‌ ಸಂಘಟನೆ ನೋಟ್ ನಿಷೇಧ ವಿರುದ್ಧ ರಾಷ್ಟ್ರಪತಿ ಭವನದ ತನಕ ರ‍್ಯಾಲಿ ನಡೆಸಿತು. ಬಳಿಕ ಮಮತಾ ಬ್ಯಾನರ್ಜಿ ನೇತೃತ್ವದ ನಿಯೋಗ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ  ಅವರನ್ನು ಮನವಿ ಸಲ್ಲಿಸಿದೆ.
ಅಮಾನತುಗೊಂಡಿರುವ ಎಎಪಿ ಎಂಪಿ ಭಗವಂತ್‌ ಮಾನ್‌,ತೃಣಮೂಲ ಎಂಪಿ ದಿನೇಶ್‌ ತ್ರಿವೇದಿ, ಶಿವಸೇನೆಯ ಮುಖ್ಯಸ್ಥ ಉದ್ಬವ್‌ ಠಾಕ್ರೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಒಮರ್‌ ಅಬ್ದುಲ್ಲ ಅವರು ನಿಯೋಗದಲ್ಲಿ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News