ಸಹಕಾರಿ ಕ್ಷೇತ್ರದ ಧ್ವಂಸಕ್ಕೆ ಬಿಜೆಪಿಯಿಂದ ಯತ್ನ: ಪಿಣರಾಯಿ
ತಿರುವನಂತಪುರಂ, ನ. 17: ಕೇರಳದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರವನ್ನು ಧ್ವಂಸಗೈಯ್ಯಲು ಬಿಜೆಪಿ ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆಂದು ವರದಿಯಾಗಿದೆ. ಈ ಕ್ರಮಗಳಲ್ಲಿ ಸ್ಪಷ್ಟವಾದ ರಾಜಕೀಯ ಷಡ್ಯಂತ್ರವಿದೆ ಎಂದು ಪಿಣರಾಯಿವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಅಪಾದಿಸಿದ್ದಾರೆ.
ಸಹಕಾರಿ ಕ್ಷೇತ್ರಗಳಲ್ಲಿ ಕಪ್ಪುಹಣ ಹೂಡಿಕೆ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಈ ಮಾತುಗಳೇ ಅವರ ಸಂಚಿಗೆ ಪುರಾವೆಯಾಗಿದೆ. ಸಹಕಾರಿ ಕ್ಷೇತ್ರವನ್ನು ಧ್ವಂಸಗೈಯ್ಯುವ ಶ್ರಮದಿಂದ ಕೇಂದ್ರ ಸರಕಾರ ಹಿಂದೆ ಸರಿಯಬೇಕು. ಈ ಪ್ರಯತ್ನಗಳನ್ನುಯಾವತ್ತೂ ಒಪ್ಪಲು ಸಾಧ್ಯವಿಲ್ಲ ಎಂದು ಪಿಣರಾಯಿ ಹೇಳಿದ್ದಾರೆ.
ಸಹಕಾರಿ ಕ್ಷೇತ್ರವನ್ನು ರಕ್ಷಿಸಬೇಕಿದೆ. ಅದು ಜನರ ಕ್ಷೇತ್ರವಾಗಿದೆ. ಕೆಲಸ ಮಾಡಿಯೂ ಸಂಬಳ ಸಿಗದೆ ಜನರು ಕಷ್ಟಪಡುತ್ತಿದ್ದಾರೆ. ಕೇರಳ ವಿಧಾನಸಭೆಯಲ್ಲಿ ಪಾಸಾದ ಕಾನೂನಿನ ಅಡಿಯಲ್ಲಿ ಸಹಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ನೀತಿಗೆ ಸಂಬಂಧಿಸಿದ ಪರಿಶೀಲನೆಯನ್ನು ಯಾರು ಬೇಕಾದರೂ ಮಾಡಬಹುದುಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆಂದು ವರದಿ ತಿಳಿಸಿದೆ.