×
Ad

ರಾಮ್ ಗೋಪಾಲ್ ಯಾದವ್ ಮತ್ತೆ ಸಮಾಜವಾದಿ ಪಾರ್ಟಿಗೆ

Update: 2016-11-17 16:49 IST

ಹೊಸದಿಲ್ಲಿ,ನವೆಂಬರ್ 17: ರಾಮ್‌ಗೋಪಾಲ್ ಯಾದವ್‌ರನ್ನು ವಜಾಗೊಳಿಸಿ ನೀಡಲಾಗಿದ್ದಆದೇಶವನ್ನು ಸಮಾಜವಾದಿ ಪಾರ್ಟಿ ಹಿಂಪಡೆದಿದೆ. ಅವರು ಪಾರ್ಟಿಯಲ್ಲಿ ಮುಂದುವರಿಯಲಿದ್ದಾರೆ ಹಾಗೂ ಸಮಾಜವಾದಿ ಪಾರ್ಟಿಯ ಕೇಂದ್ರ ಪಾರ್ಲಿಮೆಂಟ್ ಸಮಿತಿ ಸದಸ್ಯರಾಗಿರುತ್ತಾರೆಂದು ಸಮಾಜವಾದಿ ಪಾರ್ಟಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಮ್ ಗೋಪಾಲ್ ಯಾದವ್, ಪಾರ್ಟಿ ತೀರ್ಮಾನದಲ್ಲಿ ತನಗೆ ಸಂತೋಷವಿದೆ ಮತ್ತು ಮುಲಾಯಂ ಸಿಂಗ್ ಯಾವತ್ತೂ ತನ್ನನ್ನು ವಿರೋಧಿಸಿಲ್ಲ ತಾನೆಂದೂ ಪಕ್ಷ ವಿರೊಧಿ ಕೆಲಸಮಾಡಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಅಖಿಲೇಶ್‌ಯಾದವ್‌ರನ್ನು ಬೆಂಬಲಿಸಿ ಪಕ್ಷದ ಸದಸ್ಯರಿಗೆ ಪತ್ರ ಬರೆದಿದ್ದಕ್ಕಾಗಿ ಅವರನ್ನು ಸಮಾಜವಾದಿ ಪಕ್ಷದಿಂದ ಆರುವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತನದಿಂದ ತೆಗೆದು ಹಾಕಲಾಗಿತ್ತು. ಪತ್ರದಲ್ಲಿ ಪಾರ್ಟಿಯ ಉತ್ತರಪ್ರದೇಶ ಅಧ್ಯಕ್ಷ ಹಾಗೂ ಅಖಿಲೇಶ್ ಚಿಕ್ಕಪ್ಪ ಶಿವಪಾಲ್‌ಯಾದವ್ ವಿರುದ್ಧ ರಾಮ್ ಗೋಪಾಲ್ ಯಾದವ್ ಟೀಕೆ ಮಾಡಿದ್ದರು. ಅಖಿಲೇಶ್‌ರನ್ನು ಬೆಂಬಲಿಸಿದರೆ ಮುಂಬರುವ ಚುನಾವಣೆಯಲ್ಲಿ ಯಶಸ್ವಿಯಾಗಬಹುದೆಂದು ಕೂಡಾ ಅವರು ಪತ್ರದಲ್ಲಿ ಸೂಚಿಸಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News