ಆಮಿರ್, ಆದಿತ್ಯ ಚೋಪ್ರಾ ನಡುವೆ ಫೈಟ್ ತಂದಿಟ್ಟ ಆಲಿಯಾ ಭಟ್ !

Update: 2016-11-17 15:53 GMT

ಮುಂಬೈ, ನ. 17 : ಖ್ಯಾತ ನಿರ್ದೇಶಕ ಆದಿತ್ಯ ಚೋಪ್ರಾ ಹಾಗು ನಟ ಆಮಿರ್ ಖಾನ್ ನಡುವೆ ತೀವ್ರ ಭಿನ್ನಾಭಿಪ್ರಾಯ ಬಂದಿದೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಆಲಿಯಾ ಭಟ್ ! 

ವಿಷಯ ಏನೆಂದರೆ, ಯಶ್ ರಾಜ್ ಸಂಸ್ಥೆಯಿಂದ ಬರಲಿರುವ ಹೊಸ ಚಿತ್ರ 'ಥಗ್ಸ್ ಆಫ್ ಹಿಂದೊಸ್ತಾನ್'  ಚಿತ್ರದಲ್ಲಿ ಆಮಿರ್ ಖಾನ್ ಹಾಗು ಅಮಿತಾಭ್ ಬಚ್ಚನ್ ಮುಖ್ಯ ಪಾತ್ರಧಾರಿಗಳು. ಚಿತ್ರದ ಪ್ರಮುಖ ಮಹಿಳಾ ಪಾತ್ರಕ್ಕೆ ಆದಿಯ ಆಯ್ಕೆ ಅವರದೇ ಸಂಸ್ಥೆಯ 'ಬೆಫಿಕ್ರೆ'ಯ ನಾಯಕಿ ವಾಣಿ ಕಪೂರ್. ಆದರೆ ಆಮಿರ್ ಗೆ ಈ ಪಾತ್ರ ಆಲಿಯಾ ಭಟ್ ಮಾಡಬೇಕು ಎಂಬ ಹಠ. ಹಾಗಾಗಿ ಈಗ ಇಬ್ಬರ ನಡುವೆ ಹಗ್ಗಜಗ್ಗಾಟ ನಡೆದಿದೆ ಎಂದು ಫಿಲ್ಫ್ ಫೇರ್ ವರದಿಯನ್ನು ಉಲ್ಲೇಖಿಸಿ ವರದಿಯೊಂದು ಪ್ರಕಟವಾಗಿದೆ. 

ಹೈವೇ , ಉಡ್ತಾ ಪಂಜಾಬ್ ನಂತಹ ವಿಭಿನ್ನ ಚಿತ್ರಗಳಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಆಲಿಯಾ ಈ ಚಿತ್ರಕ್ಕೆ ಉತ್ತಮ ಆಯ್ಕೆ ಎಂಬುದು ಆಮಿರ್ ನಿಲುವು. ಆದರೆ ಒಂದೇ ಚಿತ್ರದಲ್ಲಿ ನಟಿಸಿದ್ದರೂ ವಾಣಿ ಕಪೂರ್ ಹೊಸ ಚಿತ್ರದಲ್ಲಿ ಅಚ್ಚರಿಯ ಪ್ರದರ್ಶನ ನೀಡುತ್ತಾರೆ ಎಂಬುದು ಆದಿತ್ಯ ಅವರ ಅಭಿಪ್ರಾಯ . 

ಈ ಹಿಂದೆ ಹೃತಿಕ್ ನಟಿಸುವುದೆಂದು ನಿರ್ಧಾರವಾಗಿದ್ದ ಥಗ್ಸ್ ಆಫ್ ಹಿಂದೊಸ್ತಾನ್ ಗೆ ಈಗ ಆಮಿರ್ ಪ್ರವೇಶವಾಗಿದೆ. ಸ್ವಾತಂತ್ರ್ಯ ಪೂರ್ವ ಭಾರತದ ಕತೆ ಇರುವ ಈ ಚಿತ್ರ ಸಾಹಸ ಪ್ರಧಾನವಾಗಿದ್ದು 2018 ರ ದೀಪಾವಳಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News