ಒಂದು ನೋಟಿಗೆ ಇದಕ್ಕಿಂತ ಅವಮಾನ ಏನಿದೆ ?

Update: 2016-11-18 04:49 GMT

ಇಂದೋರ್, ನ.18: ಹೊಸ 2000 ರೂ. ಕರೆನ್ಸಿ ನೋಟುಗಳ ವಿಚಾರದಲ್ಲಿ ನಡೆದ ಪ್ರಪ್ರಥಮ ವಂಚನೆ ಪ್ರಕರಣ ಎನ್ನಬಹುದಾದ ಘಟನೆ ಮಧ್ಯ ಪ್ರದೇಶದ ಶಾಜಾಪುರದಲ್ಲಿ ನಡೆದಿದೆ. ಅಲ್ಲಿನ ನಾಲ್ಕು ಮಂದಿ ಶಾಲಾ ಮಕ್ಕಳು 2000 ರೂ. ನೋಟಿನ ಫೋಟೋಕಾಪಿ ಮಾಡಿ ಅದನ್ನು ಉಪಯೋಗಿಸಿಕೆಲವು ಉತ್ಪನ್ನಗಳನ್ನು ಖರೀದಿಸಿ ಅಲ್ಲಿನ ಮಿಲ್ಕ್ ಪಾರ್ಲರ್ ಅಂಗಡಿಯಾತನೊಬ್ಬನಿಗೆ ಗುರುವಾರ ವಂಚಿಸಿದ್ದಾರೆ.

ಶಾಲೆಗೆ ಹೊರಟಿದ್ದ ಮಕ್ಕಳು ದಾರಿಯಲ್ಲಿ ಗೋಪಾಲಕೃಷ್ಣ ಯಾದವ್ ಎಂಬವರ ಅಂಗಡಿಯಲ್ಲಿ ಸುಮಾರು6 ಗಂಟೆಯ ಹೊತ್ತಿಗೆ ಹಾಲು, ಚಾಕಲೇಟ್ ಮೊದಲಾದ 200 ರೂ. ಮೌಲ್ಯದ ವಸ್ತು ಖರೀದಿಸಿ ಯಾದವ್ ಅವರಿಂದ 1,800 ರೂಪಾಯಿ ಚೇಂಜ್ ಪಡೆದಿದ್ದರು. ಅಂಗಡಿಯಾತ ಮಕ್ಕಳಿಂದ ಸಂತಸದಿಂದಲೇ ಪಡೆದಿದ್ದ 2000 ರೂ. ನೋಟನ್ನು ನಂತರ ಸಂಶಯಗೊಂಡುಅಪರಾಹ್ನದ ವೇಳೆಗೆ ತನ್ನ ಮಗನಿಗೆ ತೋರಿಸಿ ನಂತರ ಅವರು ಸ್ಥಳೀಯ ಬ್ಯಾಂಕ್ ಶಾಖೆಗೆ ಹೋದಾಗ ಅಲ್ಲಿನ ಅಧಿಕಾರಿಗಳು ಹೇಳಿದ್ದು ಕೇಳಿ ತಂದೆ-ಮಗನಿಗೆ ಆಘಾತವಾಗಿತ್ತು. ಮಕ್ಕಳು ಕೊಟ್ಟ ನೋಟು2000 ರೂ. ನೋಟಿನ ಕಲರ್ ಫೋಟೋಕಾಪಿಯಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದರು.
ಈ ಬಗ್ಗೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಸಂತ್ರಸ್ತ ಅಂಗಡಿಯಾತಮಕ್ಕಳನ್ನು ಗುರುತಿಸಲು ವಿಫಲವಾಗಿದ್ದು, ಅವರೆಲ್ಲಾ ಶಾಲಾ ಬ್ಯಾಗ್ ಹೆಗಲಿಗೆ ಹಾಕಿಕೊಂಡಿದ್ದರು ಎಂದಷ್ಟೇ ಹೇಳಿದ್ದಾರೆ. ನಕಲಿ ನೋಟು ಪ್ರಕರಣ ದಾಖಲಿಸಲು ಕನಿಷ್ಠ ಐದು ನಕಲಿ ನೋಟುಗಳು ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News