ಏನು ಬೇಕಾದರೂ ಸಿಗುವ ಈ ಖ್ಯಾತ ಮಾರುಕಟ್ಟೆಯಲ್ಲಿ ಈಗ ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವುದು ಹಣ !

Update: 2016-11-18 05:03 GMT

ಕೊಲ್ಕತ್ತಾ, ನ.18: ಬುರ್ರಾಬಝಾರ್, ಹೌದು ಇದು ಕೊಲ್ಕತ್ತಾದ ಅತ್ಯಂತ ಹಳೆಯ ಮಾರುಕಟ್ಟೆ. ಏನು ಬೇಕಾದರೂ ಸಿಗುವ ಒಂದೇ ಒಂದು ಸ್ಥಳ ಇದಾಗಿದೆ. ಆದರೆ ಇತ್ತೀಚೆಗೆ 500 ಹಾಗೂ 1000 ರೂ ಹಳೆನೋಟು ರದ್ದುಗೊಂಡ ನಂತರ ನಗದು ಹಣ ವಿರಳವಾಗುತ್ತಿದ್ದಂತೆಯೇ ಇಲ್ಲಿ ಅತ್ಯಂತ ಹೆಚ್ಚು ಖರೀದಿ ಹಾಗೂ ಮಾರಾಟವಾಗುತ್ತಿರುವುದು ಹಣವಾಗಿದೆ.

ನೂರು ರೂಪಾಯಿ ನೋಟುಗಳ ತೀವ್ರ ಕೊರತೆಯಿಂದಾಗಿ ದಿನಗೂಲಿ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೀಡಾಗಿದ್ದು, ಅವರಲ್ಲಿರುವ ಹಳೆಯ 500 ಹಾಗೂ 1000 ರೂ. ನೋಟುಗಳಿಗೆ ಬೆಲೆಯಿಲ್ಲದಂತಾಗಿದೆ.
ಇಲ್ಲಿ ಪ್ರತಿ ಹಳೆಯ 500 ರೂ ನೋಟಿನ ಬದಲಿಗೆ ರೂ 460 ರಿಂದ 480 ರ ತನಕ ನೀಡಲಾಗುತ್ತದೆ. ಯಾರು ನೋಟು ಬದಲಿಸಲು ಬರುತ್ತಾರೆ ಎಂಬ ಆಧಾರದಲ್ಲಿ ವಿನಿಮಯ ದರ ನಿರ್ಧಾರವಾಗುತ್ತದೆ. ಬುಧವಾರದಂದು ಹಳೆಯ 1000 ರೂ. ನೋಟನ್ನು ರೂ 600ಕ್ಕೆ ಇಲ್ಲಿ ವಿನಿಮಯ ಮಾಡಿ ಕೊಡಲಾಗುತ್ತಿತ್ತು.
ಕಳೆದ ಹಲವಾರು ವರ್ಷಗಳಿಂದ ಬುರ್ರಾ ಬಜಾರ್ ಹಲವು ಏಳುಬೀಳುಗಳನ್ನು ಕಂಡ ಹೊರತಾಗಿಯೂ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ಸಿರಾಜ್-ಉದ್ ದೌಲಾಹ್ ಈ ಮಾರುಕಟ್ಟೆಗೆ 1756ರಲ್ಲಿ ಬೆಂಕಿಯಿಟ್ಟ ಘಟನೆಯಿಂದ ಹಿಡಿದು, ಬೆಂಗಾಲಿ ಜಮೀನುದಾರ ಕುಟುಂಬಗಳ ಅವನತಿ, ಬರ, 1905 ಹಾಗೂ 1947 ರಲ್ಲಿ ನಡೆದ ಬಂಗಾಳದ ವಿಭಜನೆ ಎಲ್ಲವನ್ನೂ ಇದು ತಾಳಿಕೊಂಡಿದೆ.
ಈ ಹಿಂದೆ ಇಂಗ್ಲಿಷ್ ಬಟ್ಟೆಗಳನ್ನು ಹಿಡಿದು ಕಾಶ್ಮೀರಿ ಸಿಲ್ಕ್, ಶ್ರೀಲಂಕಾದ ದಂತದಿಂದ ಹಿಡಿದ ಟಿಬೆಟ್ಟಿನ ದನದ ಬಾಲಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿದ್ದರೆ ಪ್ರಾಯಶಃ ಈ ಮಾರುಕಟ್ಟೆ ಹಣವನ್ನು ಖರೀದಿಸಿ ಮಾರಾಟ ಮಾಡುತ್ತಿರುವುದು ಇದೇ ಮೊದಲಾಗಿದೆ.
ಇಲ್ಲಿನ ಒಬ್ಬ ವ್ಯಾಪಾರಸ್ಥರ ಪ್ರಕಾರ ಒಬ್ಬ ಮಾರಾಟಗಾರ ಹಳೆ ನೋಟುಗಳನ್ನು ಬಟ್ಟಾ ಅಥವಾ ಕಮಿಷನ್ ಗೆ ವಿನಿಮಯ ಮಾಡಿ ಕೋಟಿಗಟ್ಟಲೆ ಸಂಪಾದಿಸಿದ ಉದಾಹರಣೆಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News