ಹಣ ವಿನಿಮಯದ ವೇಳೆ ಅಳಿಸಲಾಗದ ಶಾಯಿ ಬಳಕೆ ; ಚುನಾವಣಾ ಆಯೋಗ ಗರಂ ...!

Update: 2016-11-18 05:19 GMT

ಹೊಸದಿಲ್ಲಿ, ನ.18:ಐದು ರಾಜ್ಯಗಳಲ್ಲಿ ಮುಂದೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಮಾನ್ಯಗೊಂಡಿರುವ ಐನೂರು ಮತ್ತು ಸಾವಿರ ರೂ. ಮುಖಬೆಲೆಯ ನೋಟು ವಿನಿಮಯದ ವೇಳೆ ಅಳಿಸಲಾಗದ ಶಾಯಿ ಬಳಕೆ ಮಾಡದಿರುವಂತೆ ಕೇಂದ್ರ ಚುನಾವಣಾ ಆಯೋಗವು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದೆ.
ನೋಟು ವಿನಿಮಯ ವೇಳೆ ಮತದಾನದ ವೇಳೆ ಬಳಕೆ ಮಾಡುವ ಅಳಿಸಲಾಗದ ಶಾಯಿನ್ನು ನೋಟು ವಿನಿಮಯ ಮಾಡುವವರ ಬೆರಳಿಗೆ ಹಚ್ಚಿದರೆ ಮುಂದೆ ಚುನಾವಣೆ ವೇಳೆ ತೊಂದರೆಯಾಗುತ್ತಿದೆ ಎಂದು ಹೇಳಿರುವ ಚುನಾವಣಾ ಆಯೋಗವು ಹಣಕಾಸು ಸಚಿವಾಲಯದ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದೆ.
ಚುನಾವಣಾ ವೇಳೆ ಹಚ್ಚುವ ಶಾಯಿಯನ್ನು ನೋಟುಗಳ ವಿನಿಮಯದ ವೇಳೆ ಬಳಸದಂತೆ ಚುನಾವಣಾ ಆಯೋಗವು ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News