ಕೇರಳ ಮುಖ್ಯಮಂತ್ರಿ, ಸಚಿವರ ಸತ್ಯಾಗ್ರಹ ಆರಂಭ

Update: 2016-11-18 06:20 GMT

ತಿರುವನಂತಪುರಂ,ನ. 18: ರಾಜ್ಯದ ಸಹಕಾರಿ ಕ್ಷೇತ್ರವನ್ನು ನಾಶಪಡಿಸಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಕೇರಳ ಮುಖ್ಯಮಂತ್ರಿ ಮತ್ತು ಸಚಿವರು ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ಬೆಳಗ್ಗೆ ಹತ್ತುಗಂಟೆಯಿಂದ ತಿರುವನಂತಪುರಂ ರಿಸರ್ವ್ ಬ್ಯಾಂಕ್ ಎದುರುಗಡೆ ಸತ್ಯಾಗ್ರಹ ನಡೆಯುತ್ತಿದೆ.

ಬೆಳಗ್ಗೆ 9:45ಕ್ಕೆ ಸೆಕ್ರೆಟರಿಯೇಟ್‌ಗೆ ಬರುವಂತೆ ಎಲ್ಲ ಸಚಿವರಿಗೂ ಮುಖ್ಯಮಂತ್ರಿ ಸೂಚಿಸಿದ್ದರು. ಅಲ್ಲಿಂದ ಪಾಳಯಂ ಹುತಾತ್ಮ ಮಂಟಪದಲ್ಲಿ ಬಂದು ಅಲ್ಲಿಂದ ಮುಖ್ಯಮಂತ್ರಿ ಮತ್ತು ಎಲ್ಲ ಸಚಿವರು ಆರ್‌ಬಿಐಯ ಕಚೇರಿ ಮುಂದೆ ಹೊರಟರು.

ಹತ್ತು ಗಂಟೆಗೆ ಸತ್ಯಾಗ್ರಹ ವೇದಿಕೆಯಲ್ಲಿ ಮುಖ್ಯಮಂತ್ರಿ, ಸಚಿವರು ಬಂದು ತಲುಪಿದ್ದು, ಸಂಜೆ ಐದು ಗಂಟೆವರೆಗೂ ಸತ್ಯಾಗ್ರಹ ಮುಂದುವರಿಯಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News