×
Ad

ಬೀದಿ ನಾಯಿಗೆ ಹೆದರಿ ಓಡಿದ ಬಾಲಕಿ ಬಾವಿಗೆ ಬಿದ್ದು ದಾರುಣ ಸಾವು

Update: 2016-11-18 12:17 IST

ತೃಶೂರ್,ನ. 18: ಬೀದಿನಾಯಿ ದಾಳಿಯಿಂದ ಪಾರಾಗಲಿಕ್ಕಾಗಿ ಓಡಿದ ಬಾಲಕಿ ಬಾವಿಗೆ ಬಿದ್ದು ಮೃತಳಾದ ಘಟನೆ ತೃಶೂರ್‌ನ ವಡಕ್ಕುಂಮುರಿ ಮೇಪ್ಪರಂಬ್ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತಳಾದ ಬಾಲಕಿ ಗ್ರೀಷ್ಮಾ(15) ಇಲ್ಲಿನ ನಿವಾಸಿ ಹರಿದಾಸ್ ಎಂಬವರ ಪುತ್ರಿಯಾಗಿದ್ದಾಳೆ. ಬೆಳಗ್ಗೆ 7:30ಕ್ಕೆ ದುರ್ಘಟನೆ ನಡೆದಿದ್ದು, ಹತ್ತಿರದ ಮನೆಯಿಂದ ಹಾಲು ತರಲು ಹೋಗಿದ್ದ ಗ್ರೀಷ್ಮಾ ಮರಳಿ ಬರುತ್ತಿದ್ದಾಗ ಅಟ್ಟಿಸಿಕೊಂಡು ಬಂದ ಬೀದಿನಾಯಿಯಿಂದ ಪಾರಾಗಲು ಓಡಿಹೋಗಿ ಬಾವಿಗೆ ಬಿದ್ದು ಮೃತಳಾಗಿದ್ದಾಳೆ. ಮೃತದೇಹವನ್ನು ಕುನ್ನುಂಕುಳಂ ತಾಲೂಕು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News