×
Ad

‘‘ನರೇಂದ್ರ ಭಾಯ್, ನೀವು ದೇಶದ ಜನರನ್ನು ಮೂರ್ಖರನ್ನಾಗಿಸಿದ್ದೀರಿ’’

Update: 2016-11-18 12:44 IST

ಹೊಸದಿಲ್ಲಿ,ನ.18 : ಗುಜರಾತ್ ರಾಜ್ಯದ ಮಾಜಿ ಬಿಜೆಪಿ ಶಾಸಕ ಹಾಗೂಪ್ರಧಾನಿ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಒಂದೊಮ್ಮೆ ಅವರ ಆಪ್ತರಾಗಿದ್ದ ಯತಿನ್ ಓಝಾ ಅವರು ಪ್ರಧಾನಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದು ಅದರಲ್ಲಿಅವರು ಇತ್ತೀಚಿಗಿನ 500 ಹಾಗೂ 1000 ರೂ. ನೋಟು ರದ್ದತಿಯ ಬಗ್ಗೆ ಪ್ರಸ್ತಾಪಿಸುತ್ತಾಪ್ರಧಾನಿ ದೇಶದ ಜನರನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ಜನರಿಂದ ನಿಯಂತ್ರಿಸಲ್ಪಟ್ಟ ಗುಜರಾತ್ ರಾಜ್ಯದ ಹಲವು ಜಿಲ್ಲಾ ಸಹಕಾರಿ ಬ್ಯಾಂಕುಗಳುನವೆಂಬರ್ 8 ರ ರಾತ್ರಿ 8 ಗಂಟೆಯಿಂದ ನವೆಂಬರ್ 9 ರ ಬೆಳಗ್ಗೆ 5 ಗಂಟೆಯ ತನಕ ರದ್ದಾದ 500 ಹಾಗೂ 1000 ರೂ ನೋಟುಗಳನ್ನುಸಣ್ಣ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಟ್ಟಿದ್ದವು ಎಂದು ಅವರು ಅರೋಪಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್  ಶಾ ಅವರ ಆಪ್ತರು ಪ್ರಧಾನಿ ನವೆಂಬರ್ 8 ರಂದು ನೋಟು ರದ್ದತಿ ಬಗ್ಗೆ ಘೋಷಿಸಿದಂದಿದನಿಂದ ಹಣ ವಿನಿಮಯ ದಂಧೆಯಲ್ಲಿ ತೊಡಗಿದ್ದಾರೆ ಹಾಗೂ ಈ ಬಗೆಗಿನ ವೀಡಿಯೊ ಆಧಾರ ತನ್ನ ಬಳಿ ಇದೆ ಎಂದು ಹೇಳಿದ ಅವರು ತಾನು ತಪ್ಪು ಹೇಳಿದ್ದೇನೆಂದಾದರೆ ಪ್ರಧಾನಿ ಅದನ್ನು ಸಾಬೀತು ಪಡಿಸಲಿ ಎಂದು ಪ್ರಧಾನಿಗೆ ಸವಾಲು ಹಾಕಿದ್ದಾರೆ.

ನವೆಂಬರ್ 15 ದಿನಾಂಕ ನಮೂದಿಸಲ್ಪಟ್ಟಿರುವ ಈ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರಾಜಕೀಯ ಗುರುವೆಂದೇ ಯತಿನ್ ಓಝಾ ಹಿಂದೆಲ್ಲಾ ಗುರುತಿಸಲ್ಪಡುತ್ತಿದ್ದರು. ಅವರು ಜುಲೈ 2016 ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ್ದರು.

ಯತಿನ್ ಓಝಾ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಬಹಿರಂಗ ಪತ್ರದ ಕನ್ನಡಾನುವಾದ ಇಲ್ಲಿದೆ ಓದಿ :

ಇಂಡಿಯಾ ಸಂವಾದ್ ಈ ಪತ್ರವನ್ನು ಫೇಸ್ ಬುಕ್ ಪೋಸ್ಟ್ ಒಂದರಿಂದ ಎತ್ತಿದೆ.

ಪ್ರೀತಿಯ ನರೇಂದ್ರ ಭಾಯಿ,

ಈ ಪತ್ರ ನಿಮ್ಮನ್ನು ತಲುಪಿದಾಗ ನೀವುಆರೋಗ್ಯವಂತರಾಗಿಯೂ, ಸಂತಸದಿಂದಲೂ ಇರುತ್ತೀರೆಂದು ನಂಬುತ್ತೇನೆ.

ನವೆಂಬರ್ 8, 2016 ರಂದು ನೋಟು ರದ್ದತಿ ಬಗ್ಗೆ ನಿಮ್ಮ ಭಾಷಣ ಆಲಿಸಿದ ನಂತರ ನನಗೆ ತುಂಬಾ ಸಂತೋಷವಾಗಿತ್ತುಹಾಗೂ ಒಳಗಿಂದೊಳಗೇ ನಿಮ್ಮ ಈ ನಿರ್ಭೀತ ಹಾಗೂ ಐತಿಹಾಸಿಕ ಕ್ರಮಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸಿದೆ. ಆದರೆ ದುರದೃಷ್ಟವೋ ಎಂಬಂತೆ ಆ ಸಂತಸ ಬಹಳ ಕಾಲ ಬಾಳಲಿಲ್ಲ. ನವೆಂಬರ್ 9 ರ ಬೆಳಗ್ಗೆತುಂಬಾ ಹತ್ತ್ತಿರದರೊಬ್ಬರು ನನಗೆ ನೀಡಿದ ಮಾಹಿತಿಯಂತೆ, ನಿನ್ನೆ, ಅಂದರೆ ನವೆಂಬರ್ 8 ರ ಅಪರಾಹ್ನ 12 ಗಂಟೆಯ ಹೊತ್ತಿಗೆ ಅಹ್ಮದಾಬಾದಿನ ಪ್ರಮುಖ ಕೈಗಾರಿಕೋದ್ಯಮಿಯೊಬ್ಬರ ಪತ್ನಿಖ್ಯಾತ ಚಿನ್ನಾಭರಣದ ಅಂಗಡಿಯೊಂದಕ್ಕೆ ಆಗಮಿಸಿ ಮುಂಚಿತವಾಗಿ ಆರ್ಡರ್ ನೀಡಿದಾನುಸಾರ 20 ಕೋಟಿ ಮೌಲ್ಯದ ಚಿನ್ನಾಭರಣ ಖರೀದಿಸಿದ್ದರು. ಚಿನ್ನಾಭರಣ ತಯಾರಾಗಿತ್ತು ಹಾಗೂ ಅದನ್ನು ಪ್ಯಾಕ್ ಕೂಡ ಮಾಡಲಾಗಿತ್ತು. ಚಿನ್ನ ಹಾಗೂ ಹಣವನ್ನು ಅದಲು ಬದಲು ಮಾಡಲು ಕೇವಲ ಎರಡು ನಿಮಿಷ ತೆಗೆದುಕೊಂಡಿತು. ನನಗೆ ಹತ್ತಿರದವರೊಬ್ಬರು ಆ ಸಂದರ್ಭ ಆ ಅಂಗಡಿಯಲ್ಲಿದ್ದು ಆಕೆ ಮೊದಲೇ ಆರ್ಡರ್ ಕೊಡಲಾಗಿದ್ದ ರೂ 5 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಲು ಆಗಮಿಸಿದ್ದರು. ಆಕೆ ಒಬ್ಬರು ಪ್ರಮುಖ ಹಾಗೂ ಗೌರವಾನ್ವಿತ ವೈದ್ಯೆಯಾಗಿದ್ದಾರೆ.

ನಿಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಿದ ಅನುಭವವಿರುವ ನನಗೆ ಆಗ ನೋಟು ರದ್ದತಿಯ ವಿಚಾರಅದನ್ನು ಘೋಷಣೆ ಮಾಡುವ ಮುನ್ನವೇಈ ದೇಶದಲ್ಲಿರುವ ಶೇ 50 ರಷ್ಟು ಕಪ್ಪು ಹಣವನ್ನು ನಿಯಂತ್ರಿಸುವ ನಿಮ್ಮ ಆತ್ಮೀಯ ಕೈಗಾರಿಕೋದ್ಯಮಿಗಳಿಗೆ ಮೊದಲೇಮಾಹಿತಿ ನೀಡಲಾಗಿತ್ತು ಎಂದು ತಿಳಿದು ಬಂದಿತ್ತು. ಈ ಬಗ್ಗೆ ಇಡೀ ದಿನ ಯೋಚಿಸಿ ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆಶ್ಚರ್ಯವಾಗಿತ್ತು. ನೀವು ಇಂತಹ ಜನಪ್ರಿಯತೆ ಗಿಟ್ಟಿಸುವ ಕ್ರಮಕ್ಕೆ ಕೈಹಾಕಿ ದೇಶ ಜನರನ್ನು ಮೂರ್ಖರನ್ನಾಗಿಸಿದ್ದೀರಿ.

ವಾಸ್ತವವಾಗಿ ನಿಮ್ಮ ಮೇಲಿನ ಕ್ರಮ ನಿಮ್ಮ ಹತ್ತಿರದವರನ್ನು ಹಾಗೂ ಪ್ರೀತಿಪಾತ್ರರನ್ನು, ನಿಮ್ಮ ಪಕ್ಷವನ್ನುಹಾಗೂ ನಿಮ್ಮ ಪಕ್ಷದ ಸದಸ್ಯರನ್ನುದೇಶದ ಹಿತಾಸಕ್ತಿಯನ್ನುಬಲಿಗೊಟ್ಟು ಉದ್ಧಾರ ಮಾಡುವುದಾಗಿದೆ. ಶ್ರೀ ಅಮಿತ್  ಶಾ ಅವರ ಎಲ್ಲಾ ಆಪ್ತರು ನವೆಂಬರ್ 8 ರಿಂದ ಇಲ್ಲಿಯ ತನಕ ಹಣ ವಿನಿಮಯ ದಂಧೆಯಲ್ಲಿ ತೊಡಗಿದ್ದಾರೆಂಬುದನ್ನು ಸ್ಪಷ್ಟವಾಗಿ ತಿಳಿಸುವ ವೀಡಿಯೊ ರೆಕಾರ್ಡಿಂಗ್ ನನ್ನ ಬಳಿ ಇದೆ. ಅವರೆಲ್ಲರ ಕಚೇರಿ ಹಾಗೂ ನಿವಾಸಗಳ ಹೊರಗೆ ದೊಡ್ಡ ಸರತಿ ಸಾಲಿದ್ದುಅಲ್ಲಿ ಕಪ್ಪು ಹಣವನ್ನು ಶೇ 37 ರಷ್ಟು ವಿನಾಯಿತಿ ದರದಲ್ಲಿ ಬಿಳಿಯಾಗಿಸಲಾಗುತ್ತದೆ. ಅಲ್ಲಿಗೆ ಒಬ್ಬರು ಯಾವುದೇ ಗುರುತು ಪತ್ರ ಇಲ್ಲದೆ ಕನಿಷ್ಠ ಒಂದು ಕೋಟಿ ರೂಪಾಯಿ ಹಿಡಿದುಕೊಂಡು ಹೋದರೆ ಅಲ್ಲಿ ಅದನ್ನು ಉದ್ಯೋಗಿಗಳುಎಣಿಸಿನಂತರ ರೂ 63 ಲಕ್ಷ ಮೌಲ್ಯದನೋಟುಗಳಿರುವ ಚೀಲಗಳನ್ನು ಅವರಿಗೆ ನೀಡಲಾಗುತ್ತಿದೆ. ಆ ವೀಡಿಯೊವನ್ನು ನಾನು ಸುಲಭವಾಗಿ ಬಹಿರಂಗಪಡಿಸಬಹುದಾಗಿತ್ತು, ಆದರೆ ನನಗೆ ನಿಮ್ಮ ಬಗ್ಗೆ ಗೊತ್ತಿದೆ. ನೀವು ಆ ಸರತಿಯಲ್ಲಿ ನಿಂತಿದ್ದವರನ್ನು ಶಿಕ್ಷಿಸಬಹುದೇ ವಿನಹ ಅಮಿತ್ ಶಾ ಅವರಿಗೆ ಹತ್ತಿರದವರಾಗಿರುವ ಹಾಗೂ ಈ ಹಣ ವಿನಿಮಯ ದಂಧೆಯಲ್ಲಿ ತೊಡಗಿರುವವರನ್ನು ನೀವುಶಿಕ್ಷಿಸಲಿಕ್ಕ್ಕಿಲ್ಲ. ಆದರೆ ಆ ವೀಡಿಯೊವನ್ನು ನಾನು ಇಬ್ಬರು ಮೂವರು ಹಿರಿಯ ಪತ್ರಕರ್ತರಿಗೆ ತೋರಿಸುತ್ತೇನೆಹಾಗೂ ನಂತರ ನಿಮಗೆ ಮಾಹಿತಿ ನೀಡುತ್ತೇನೆ, ನೀವು ಪತ್ರಕರ್ತರಿಂದ ನನ್ನ ಹೇಳಿಕೆಯಲ್ಲಿನ ವಾಸ್ತವಾಂಶಗಳನ್ನು ಪರಿಶೀಲಿಸಬಹುದು.

ಜಿಲ್ಲಾ ಸಹಕಾರಿ ಬ್ಯಾಂಕುಗಳ ಹಂತದಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತವೆ ಎಂಬ ಮಾಹಿತಿ ದೊರೆತ ನಂತರ ನೀವು ಈ ಬ್ಯಾಂಕುಗಳು ನೋಟು ವಿನಿಮಯ ಮಾಡುವುದನ್ನು ನಿಷೇಧಿಸಿದ್ದೀರೆಂದು ನಿಮ್ಮನ್ನು ತಿಳಿದವರು ಒಪ್ಪಲು ನಿರಾಕರಿಸಬಹುದು. ನಿಮ್ಮ ವೈರಿ ಕೂಡ ನಿಮ್ಮ ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಯನ್ನು ಗೌರವಿಸುತ್ತಾನೆ. ಇಂತಹ ಒಂದು ಪ್ರಮುಖ ವಿಚಾರ ನಿಮ್ಮ ಮನಸ್ಸಿನ ಹೊರಗಿರಲಿಕ್ಕಿಲ್ಲ ಎಂಬುದು ಸ್ಪಷ್ಟ.ನೀವು ಕೈಗೊಳ್ಳುವ ಕ್ರಮದ ಸಂಪೂರ್ಣ ಚಿತ್ರಣ ನಿಮ್ಮ ಮನಸ್ಸಿನಲ್ಲಿರುವ ತನಕನೀವು ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂಬುದು ನನಗೆ ತಿಳಿದಿದೆ. ನೀವು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಅದರ ಉತ್ತಮ ಹಾಗೂ ಅಡ್ಡ ಪರಿಣಾಮಗಳೂ ನಿಮ್ಮ ಮನಸ್ಸಿನಲ್ಲಿರುತ್ತದೆ. ಗುಜರಾತ್ ರಾಜ್ಯದ ಎಲ್ಲಾಜಿಲ್ಲಾಸಹಕಾರಿ ಬ್ಯಾಂಕುಗಳುಬಿಜೆಪಿಯ ಜನರ ನಿಯಂತ್ರಣದಲ್ಲಿರುವುದರಿಂದ ಈ ಬ್ಯಾಂಕುಗಳು 8-11-2016 ರ ರಾತ್ರಿ 9 ಗಂಟೆಯಿಂದ 9-11-2016 ರಂದು ಬೆಳಗ್ಗೆ 5 ಗಂಟೆಯ ತನಕ ರೂ 500 ಹಾಗೂ ರೂ 1000 ನೋಟುಗಳನ್ನು ಸಣ್ಣ ಮೌಲ್ಯದ ಸಮನಾದ ಮೌಲ್ಯದ ನೋಟುಗಳಿಗೆ ವಿನಿಮಯ ಮಾಡಿದೆ. ನೀವು ಆರ್ ಬಿ ಐ ಮುಖಾಂತರ ದೇಶದ ಎಲ್ಲಾ ಬ್ಯಾಂಕುಗಳಲ್ಲಿ 8-11-2016 ರಂದು ಇದ್ದ ನಗದು ಹಾಗೂ ಅವು ಯಾವ ಮುಖಬೆಲೆಯ ನೋಟುಗಳು ಎಂಬಬಗ್ಗೆ ಮಾಹಿತಿ ಕೇಳಿದ್ದೀರಿ. ನನ್ನ ಮೇಲಿನ ಹೇಳಿಕೆಯ ಸತ್ಯಾಸತ್ಯತೆಯನ್ನು ನೀವು ಪರಿಶೀಲಿಸಬಹುದು. ನಾನು ಹೇಳಿದ್ದು ತಪ್ಪು ಎಂದು ಸಾಬೀತಾದರೆ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ.

ತಿಮಿಂಗಿಲಗಳನ್ನು ಬಿಟ್ಟು ಬಿಡಲಾಗಿದೆ ಹಾಗೂ ನಿಮ್ಮ ಆತ್ಮೀಯ ಕೈಗಾರಿಕೋದ್ಯಮಿಗಳಿಗೆನೋಟು ರದ್ದತಿಯ ವಿಚಾರ ಮೊದಲೇತಿಳಿಸಲಾಗಿದೆಯೆಂದು ಜನರ ಮನಸ್ಸಿನಲ್ಲಿರುವ ಸಂಶಯವನ್ನು ನಿವಾರಿಸಲುಭಾರತ ಸರಕಾರದ ಅಧಿಕೃತ ವೆಬ್ ಸೈಟಿನಲ್ಲಿನೀವು ಒಂದು ಕೋಟಿಗೂ ಅಧಿಕ ಹಣ ಠೇವಣಿಯಿಟ್ಟವರು ಮಾಹಿತಿ ಬಹಿರಂಗಪಡಿಸಬೇಕೆಂದು ತಿಳಿಸಬೇಕು.ಭಾರತದ ಮೊದಲ 300 ಫಾರ್ಚೂನ್ ಕಂಪೆನಿಗಳಒಬ್ಬನೇ ಒಬ್ಬಅಧ್ಯಕ್ಷ, ಆಡಳಿತ ನಿರ್ದೇಶಕ ಯಾ ನಿರ್ದೇಶಕರು ಮುಂದೆ ಬಂದು ಮಾಹಿತಿ ನೀಡದೇ ಇದ್ದರೆ ನನ್ನ ಆರೋಪ ಸಾಬೀತಾದಂತೆಯೇ ಸರಿ. ರೂ 4000 ಹಾಗೂ ಅದಕ್ಕಿಂತಲೂ ಕೆಳಗಿನ ಠೇವಣಾತಿಗಾಗಿ ಜನರು ಹಸಿವು ಬಾಯಾರಿಕೆಯನ್ನು ಲೆಕ್ಕಿಸದೆ ಸರತಿ ನಿಂತಿದ್ದನ್ನು ನಾನು ನೋಡಿದ್ದೇನೆ. ಆದರೆಒಂದೇ ಒಂದು ಮರ್ಸಿಡಿಸ್, ಬಿಎಂ ಡಬ್ಲ್ಯು, ಆಡಿ, ವೊಲ್ವೊ, ಪೋರ್ಶೆ ಯಾ ರೇಂಜ್ ರೋವರ್ ವಾಹನಗಳು ಯಾವುದೇ ಬ್ಯಾಂಕಿನಹೊರಗಿರಲಿಲ್ಲ ಹಾಗೂ ಇಂತಹ ವಾಹನದ ಯಾವನೇ ಮಾಲಕ ಸರತಿಯಲ್ಲಿ ನಿಂತು ಹಣ ಹಿಂಪಡೆಯಲು ನಿಲ್ಲಲಿಲ್ಲ. ನಿಮ್ಮ ಪ್ರಕಾರ ಕಪ್ಪು ಹಣವನ್ನು ಬ್ಯಾಂಕು ಅಥಾ ಎಟಿಎಂ ಎದುರು ಕ್ಯೂ ನಿಂತವರೇ ಶೇಖರಿಸಿರಬಹುದಲ್ಲದೆ ಮೇಲೆ ತಿಳಿಸಲಾದ ವಾಹನಗಳ ಮಾಲಕರು ಅಲ್ಲ. ಈ ಮೇಲಿನ ಫಾರ್ಚೂನ್ 300 ಕೈಗಾರಿಕೋದ್ಯಮಿಗಳ ಹೊರತಾಗಿ ಬಿಲ್ಡರುಗಳು, ಗುತ್ತಿಗೆದಾರರು, ಸರಕಾರಿ ಗುತ್ತಿಗೆ ಪಡೆದವರು, ಗಣಿ ಉದ್ಯಮಿಗಳು,ಮುಖ್ಯವಾಗಿ ಕಬ್ಬಿಣದ ಅದಿರು ಗಣಿಯವರು ಇತರಕೈಗಾರಿಕೋದ್ಯಮಿಗಳು ಹಾಗೂ ರಾಜಕಾರಣಿಗಳು ಮತ್ತು ಅಧಿಕಾರಿಗಳು ಎಷ್ಟು ಹಣ ಠೇವಣಿಯಿರಿಸಿದ್ದಾರೆಂಬುದನ್ನು ಈ ದೇಶದ ಜನರು ತಿಳಿಯ ಬಯಸುತ್ತಾರೆ,

ಯಾರುಎಷ್ಟು ಹಣ ಠೇವಣಿಯಿರಿಸಿದ್ದಾರೆಂಬ ಮಾಹಿತಿ ನೀಡದ ಹೊರತುಶೇ 50 ರಷ್ಟು ಕಪ್ಪು ಹಣ ಶೇಖರಿಸಿರುವ 10-12 ಕೈಗಾರಿಕೆಗಳ ಮಂದಿಗೆ ಮುಂಚಿತವಾಗಿ ಮಾಹಿತಿ ನೀಡಿ ನೀವು ಆಶೀರ್ವಾದ ಮಾಡಿದ್ದೀರೆಂಬುದು ಸಾಬೀತಾಗುತ್ತದೆ. ನೀವು ಒಂದು ಲಕ್ಷ ಕೋಟಿ ಮೌಲ್ಯದ ಭೂಮಿ ಮಂಜೂರು ಮಾಡಿದ ಹೊರತಾಗಿಯೂ 7000 ಜನರಿಗೆ ಉದ್ಯೋಗ ಒದಗಿಸದ ಆ 10-12 ಕೈಗಾರಿಕೆಗಳು ಮಾಡಿದ ಠೇವಣಿಯೆಷ್ಟುಎಂಬುದನ್ನು ಬ್ಯಾಂಕುಗಳ ಎದುರು ಸರತಿ ನಿಲ್ಲುವ ಜನರಿಗೆ ಕನಿಷ್ಠ ತಿಳಿಯುವಂತಾಗಬೇಕು. 300 ರಿಂದ 400 ಕೋಟಿಠೇವಣಿಯಿರಿಸಿದ ವ್ಯಕ್ತಿಗಳು ಯಾರು ಎಂದು ವೆಬ್ ಸೈಟ್ ನಲ್ಲಿ ಠೇವಣಿಗಳ ಬಗ್ಗೆ ಮಾಹಿತಿ ಹಾಕಿದರೆ ತಿಳಿಯುವುದಲ್ಲದೆ ಹಾಗೂಅವರ ಠೇವಣಿಗಳು ಅವರುಪಾವತಿಸುವ ಆದಾಯ ತೆರಿಗೆಗೆ ಹೊಂದಾಣಿಕೆಯಾಗದೇ ಇದ್ದಲ್ಲಿ ಆದಾಯ ತೆರಿಗೆಇಲಾಖೆ ಅವರ ವಿರುದ್ಧ ಯಾವ ಕ್ರಮ ಕೈಗೋಳ್ಳುವುದೆಂದು ತಿಳಿಸಬೇಕು. ಯಾರೆಲ್ಲಾಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು 7 ಹಾಗೂ 8 ತಾರೀಕಿನಂದುರಾತ್ರಿ 8 ಗಂಟೆಯ ಮೊದಲು ಖರೀದಿಸಿದ್ದರೆಂಬುದನ್ನು ವಿಚಾರಿಸಬೇಕೆಂದು ನಿಮಗೆ ವಿನಂತಿ. ದೊಡ್ಡ ಕುಳಗಳು ದೊಡ್ಡ ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳಖನ್ನು ಏಕೆ ಖರೀದಿಸುವಂತಾಯಿತು ಎಂದು ಜನರಿಗೆ ಆಗ ತಿಳಿಯುತ್ತದೆ.

ಮೇಲೆ ಕೇಳಲಾದ ಮಾಹಿತಿಯನ್ನು ಭಾರತ ಸರಕಾರದ ಅಧಿಕೃತ ವೆಬ್ ಸೈಟಿನಲ್ಲಿಶೇರ್ ಮಾಡುವಷ್ಟು ಉದಾರಿ ನೀವಾಗಬೇಕು ಹಾಗೆ ಮಾಡಿದಲ್ಲಿನೋಟು ರದ್ದತಿಯು ದೇಶದ ಹಿತಾಸಕ್ತಿಗಾಗಿ ಮಾಡಲಾಗಿದೆಯೇ ಅಥವಾ ನೇರವಾಗಿ ನಿಮ್ಮ ಪ್ರೀತಿ ಪಾತ್ರರಿಗೆ ಹಾಗೂ ನಿಮ್ಮ ಪಕ್ಷ ಕಾರ್ಯಕರ್ತರಿಗೆ ಸಹಾಯ ಮಾಡಲು ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗುತ್ತದೆ.

ನಿಮ್ಮವನೇ ಆದ

ಯತಿನ್ ಓಝಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News