ಮೂತ್ರದ ಬ್ಯಾಗ್‌ನೊಂದಿಗೆ ಬ್ಯಾಂಕ್ ಸಾಲಲ್ಲಿ ನಿಂತ ರೋಗಿ !
Update: 2016-11-18 15:24 IST
ಕಾಯಂಕುಳಂ, ನ. 18: ನೋಟು ಅಮಾನ್ಯಗೊಳಿಸಿದ ಕ್ರಮದಿಂದಾಗಿ ಎದ್ದು ನಡೆಯಲು ಸಾಧ್ಯವಿಲ್ಲದ ರೋಗಿಗಳ ಮುಂದೆ ಸಂಕಷ್ಟ ಬಂದಪ್ಪಳಿಸಿದೆ.
ಮೂತ್ರಚೀಲದೊಂದಿಗೆ ಬ್ಯಾಂಕ್‌ಗೆ ಬಂದ ಹಿರಿಯರೊಬ್ಬರ ದುಃಸ್ಥಿತಿ ತೀರಾ ವಿಷಾದನೀಯವಾಗಿತ್ತು. ಭರಣಕ್ಕಾವ್ ಕೋಯಿಕ್ಕಲ್ ಚಂದ ಎಂಬಲ್ಲಿನ ಸ್ಟೇಟ್‌ಬ್ಯಾಂಕ್ ಶಾಖೆಗೆ ಕ್ಯಾನ್ಸರ್‌ರೋಗದಿಂದ ಬಳಲುತ್ತಿರುವ ಪಳ್ಳಿಕ್ಕಲ್ ಪುದುಪ್ಪುರಕ್ಕಲ್ ವಡಕ್ಕತಿಲ್ ಜಾರ್ಜ್(67) ಬ್ಯಾಂಕಿನಿಂದ ಹಣ ನಗದೀಕರಿಸಲು ಬಂದಿದ್ದರು.
ಹನ್ನೆರಡು ವರ್ಷಗಳಿಂದ ರೋಗಪೀಡಿತರಾಗಿರುವ ಜಾರ್ಜ್‌ಗೆ ಮೂತ್ರಕೋಶದ ಸಮಸ್ಯೆ ಕೂಡಾ ಇದೆ. ಆದ್ದರಿಂದ ಅವರು ಯುರಿನ್ ಬ್ಯಾಗ್ ಹಿಡಿದು ಅಡ್ಡಾಡಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಅವರು ಆಸ್ಪತ್ರೆಗೆ ಮಾತ್ರ ಹೋಗುತ್ತಿದ್ದರು. ಆದರೆ ಖಾತೆಯ ಹಣವನ್ನು ಪಡೆಯಲು ಗ್ರಾಹಕ ನೇರವಾಗಿ ಹಾಜರಾಗಬೇಕೆಂಬ ನಿಬಂಧನೆಯಿಂದಾಗಿ ಜಾರ್ಜ್ ಅಸಹನೀಯ ನೋವು ಸಹಿಸಿ ಬ್ಯಾಂಕ್‌ಗೆ ಬಂದಿದ್ದರು ಎಂದು ವರದಿತಿಳಿಸಿದೆ.