×
Ad

ಹೊಸನೋಟಿನೊಂದಿಗೆ 500 ರೂ.ನೋಟಿನ ಚಲಾವಣೆಗೂ ಅವಕಾಶವಿರಲಿ: ಮಮತಾ

Update: 2016-11-18 18:10 IST

ಕೋಲ್ಕತಾ,ನ. 18: ನರೇಂದ್ರ ಮೋದಿ ಸರಕಾರವು ‘ಕ್ರಮರಹಿತ ಪ್ರಕಟಣೆಗಳನ್ನು ’ ಮಾಡುತ್ತಿದೆ ಎಂದು ಶುಕ್ರವಾರ ಇಲ್ಲಿ ಆರೋಪಿಸಿದ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಜನಸಾಮಾನ್ಯರಿಗೆ ನೆರವಾಗಲು ಹೊಸನೋಟು ಗಳೊಂದಿಗೆ ಹಳೆಯ 500 ರೂ.ನೋಟುಗಳೂ ಚಲಾವಣೆಯಲ್ಲಿರಲು ಅದು ಅವಕಾಶ ನೀಡಬೇಕು ಎಂದು ಹೇಳಿದರು.

ನಾವು ಪರಿಹಾರಕ್ಕಾಗಿ ಹುಡುಕುತ್ತಿದ್ದೇವೆ. ಸಹಜ ಸ್ಥಿತಿಯ ಮರುಸ್ಥಾಪನೆಗೆ ನೆರವಾಗಬಲ್ಲ ಮತ್ತು ಸಂಕಷ್ಟದಲ್ಲಿರುವ ಎಲ್ಲ ಜನರಿಗೆ ಸಹಾಯವಾಗಬಲ್ಲ ಕೆಲವು ಗಟ್ಟಿಸಲಹೆಗಳು ನನ್ನ ಬಳಿಯಿವೆ. ಹೊಸನೋಟುಗಳೊಂದಿಗೆ ಹಳೆಯ 500 ರೂ.ನೋಟುಗಳ ಚಲಾವಣೆಗೂ ಅವಕಾಶವಿರಬೇಕು,ಜೊತೆಗೆ 100,50 ಮತ್ತು 10 ರೂ.ನೋಟುಗಳು ಸಹ ಸುಲಭವಾಗಿ ಲಭ್ಯವಾಗಿರಬೇಕು ಎಂದು ಅವರು ಹೇಳಿಕೆ ಯೊಂದರಲ್ಲಿ ತಿಳಿಸಿದರು.

ಡಿ.30ರ ವೇಳೆಗೆ ಚಲಾವಣೆ ಸ್ಥಿತಿ ಸುಧಾರಿಸಿದ ಬಳಿಕ ಅಥವಾ ಸರಕಾರದ ವಿವೇಚನೆಗೆ ತಕ್ಕಂತೆ 1,000 ರೂ.ನೋಟುಗಳನ್ನು ವಾಪಸ್ ಪಡೆಯಬಹುದಾಗಿದೆ ಎಂದ ಅವರು, ಇನ್ನಷ್ಟು ಸುಳ್ಳು, ಕ್ರಮರಹಿತ ಪ್ರಕಟಣೆಗಳ ಅಗತ್ಯವಿಲ್ಲ. ಕೆಲವೊಮ್ಮೆ ತಪ್ಪುಗಳು ಇನ್ನಷ್ಟು ತಪ್ಪುಗಳಿಗೆ ಕಾರಣವಾಗುತ್ತವೆ ಎಂದರು.

  ನೋಟು ನಿಷೇಧ ಕ್ರಮವನ್ನು ಹಿಂದೆಗೆದುಕೊಳ್ಳಲು ಮೋದಿ ಸರಕಾರಕ್ಕೆ ಮೂರು ದಿನಗಳ ಗಡುವು ನೀಡಿರುವ ಮಮತಾ ಮತ್ತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಸದ್ಯದ ಗೊಂದಲ ಮುಂದುವರಿದರೆ ವ್ಯಾಪಕ ಅಶಾಂತಿಯೇಳುವ ಎಚ್ಚರಿಕೆಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News