ನೋಟಿನ ಏಟಿನಿಂದ ಮಾನಸಿಕ ಅನಾರೋಗ್ಯ: ತಜ್ಞರು
ಕೋಲ್ಕತಾ, ನ.18: ಕೇಂದ್ರ ಸರಕಾರದ ನೋಟು ರದ್ದತಿಯ ನಿರ್ಧಾರದಿಂದ ಪಶ್ಚಿಮಬಂಗಾಳದ ಗ್ರಾಮಾಂತರ ಪ್ರದೇಶಗಳ ವ್ಯಾಪಾರಿಗಳಿಗೆ ಹಣದ ಅಡಚಣೆ ಉಂಟಾಗಿದ್ದು, ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲಿ ಸಂಪೂರ್ಣ ವ್ಯಾಪಾರ ನಗದಿನ ಮೂಲಕವೇ ನಡೆಯುತ್ತಿತ್ತು.
ಸರಕಾರ ನೋಟು ರದ್ದತಿ ಘೋಷಿಸಿದ ಒಂದೆರಡು ದಿನಗಳಲ್ಲಿ ಬಟಾಟೆ ಸಗಟು ವ್ಯಾಪಾರಿಯೊಬ್ಬ ದಿಗಿಲಿನ ಆಘಾತ ಆರಂಭವಾಯಿತು. ಶೀತಲ ಗೃಹದಲ್ಲಿ ಆತನಿಗೆ ಸೇರಿಸ ಸುಮಾರು ರೂ. 50-60 ಲಕ್ಷದ ಮಾಲು ದಾಸ್ತಾನಿತ್ತು. ಅದು ಬೇಗನೆ ಕೊಳೆಯಬಲ್ಲ ಕೃಷಿ ಉತ್ಪನ್ನವಾಗಿತ್ತು.
ಆ ವ್ಯಾಪಾರಿ ಸಾಲ ರೂಪದಲ್ಲಿ ಸಗಟಾಗಿ ಬಟಾಟೆ ಖರೀದಿಸುತ್ತಾನೆ ಹಾಗೂ ಸಣ್ಣ ವ್ಯಾಪಾರಿಗಳಿಗೆ ನಗದಿನಲ್ಲಿ ಮಾರುತ್ತಿದ್ದಾನೆ. ಆದೆರ, ನಗದು ಬಿಕ್ಕಟ್ಟಿನ ಕಾರಣ ಈಗ ಬಟಾಟೆ ಖರೀದಿಸುವವರೇ ಇಲ್ಲ.
ತನ್ನ ಸಂಪೂರ್ಣ ದಾಸ್ತಾನು ವ್ಯರ್ಥವಾಗಲಿದೆಯೆಂಬ ಭೀತಿ ಆ ಸಗಟು ವ್ಯಾಪಾರಿಯದಾಗಿದೆ. ಅದರಿಂದಾಗಬಹುದಾದ ಭಾರೀ ನಷ್ಟವನ್ನು ಎಣಿಸಿ ಆತ ದಿಗಿಲು, ಕಾತರಗಳ ಆಘಾತ ಅನುಭವಿಸುತ್ತಿದ್ದಾನೆ ಹಾಗೂ ತಾನು ಸಾಯುವೆನೆಂದು ಯೋಚಿಸುತ್ತಿದ್ದಾನೆಂದು ಹಿರಿಯ ಮನೋರೋಗ ತಜ್ಞ ಸಂಜಯ್ ಗರ್ಗ್ ತಿಳಿಸಿದ್ದಾರೆ.
ರೂ. 500 ಹಾಗೂ 1000ದ ನೋಟು ರದ್ದತಿಗೆ ಸರಕಾರ ನಿರ್ಧರಿಸಿದ ಬಳಿಕ, ಮಾನಸಿಕ ಒತ್ತಡದಿಂದ ಬಳಲುವ ಗಮನಾರ್ಹ ಸಂಖ್ಯೆಯ ರೋಗಿಗಳು ತಮ್ಮ ಬಳಿ ಬರುತ್ತಿದ್ದಾರೆಂದು ಮಾನಸಿಕ ತಜ್ಞರು ಹೇಳುತ್ತಿದ್ದಾರೆ.
ಅವರಲ್ಲಿ ಹೆಚ್ಚಿನವರು, ಪ್ಲಾಸ್ಟಿಕ್ ಹಣ ತಲುಪದಿರುವ ಗ್ರಾಮಾಂತರ ಬಂಗಾಳದ ಮಾಧ್ಯಮ ಮತ್ತು ಮೇಲ್ಮಧ್ಯಮ ದರ್ಜೆಯ ಕುಟುಂಬಗಳಿಗೆ ಸೇರಿದವರಾಗಿದ್ದಾರೆಂದು ಗರ್ಗ್ ತಿಳಿಸಿದ್ದಾರೆ.
ತನ್ನ ಒಬ್ಬಾಕೆ ರೋಗಿ ಮೃತ ಗಂಡನ ರೂ. 30 ಲಕ್ಷ ನಗದು ಉಳಿತಾಯದ ವಾರಸುದರಳಾಗಿದ್ದಾಳೆ. ಆಕೆಗೆ 50ರ ಹರೆಯ. ಆ ಮಹಿಳೆ ಫ್ಲಾಟ್ ಒಂದನ್ನು ಖರೀದಿಸುವ ಹಾಗೂ ಉಳಿದ ಹಣವನ್ನು ಮಗನ ಮದುವೆಗೆ ಖರ್ಚು ಮಾಡುವ ಯೋಜನೆಯಲ್ಲಿದ್ದಳು. ಈಗ ಆಕೆಗೆ ಅಭದ್ರತೆಯ ಭಾವನೆ ಉಂಟಾಗಿದೆ. ಆದುದರಿಂದ ಒತ್ತಡದಿಂದ ಮುಕ್ತಿ ಪಡೆಯಲು ಅಲ್ಪಕಾಲಿಕ ಔಷಧೋಪಚಾರಕ್ಕೆ ಆಕೆ ಶರಣು ಹೋಗಿದ್ದಾಳೆಂದು ಇನ್ನೊಬ್ಬರು ಮಾನಸಿಕ ತಜ್ಞೆ ಸಂತಶ್ರೀ ಗುಪ್ತಾ ವಿವರಿಸಿದ್ದಾರೆ.