×
Ad

ನಾಳೆ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಮಾತ್ರ ಹಳೆಯ ನೋಟುಗಳ ವಿನಿಮಯಕ್ಕೆ ಅವಕಾಶ

Update: 2016-11-18 20:28 IST

ಹೊಸದಿಲ್ಲಿ,ನ.18: ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಲ್ಲಿ ಕೇವಲ ಹಿರಿಯ ನಾಗರಿಕರು ಮಾತ್ರ 500 ಮತ್ತು 1,000 ರೂ.ಗಳ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯಿಸಿಕೊಳ್ಳಬಹುದಾಗಿದೆ.
ನಾಳೆ ಬ್ಯಾಂಕುಗಳು ಸಾಮಾನ್ಯ ಕೆಲಸದ ಅವಧಿಯಲ್ಲಿ ಕಾರ್ಯ ನಿರ್ವಹಿಸಲಿವೆ.

ಇಂದಿಲ್ಲಿ ಈ ವಿಷಯವನ್ನು ತಿಳಿಸಿದ ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜೀವ್ ರಿಷಿ ಅವರು, ಬ್ಯಾಂಕುಗಳು ತುಂಬ ಶ್ರಮವಹಿಸಿ ಕೆಲಸ ಮಾಡುತ್ತಿವೆ. ಈಗ ಬ್ಯಾಂಕುಗಳಲ್ಲಿ ಜನಸಂದಣಿ ಕಡಿಮೆಯಾಗಿದ್ದು, ಶನಿವಾರ ಹಿರಿಯ ನಾಗರಿಕರನ್ನು ಹೊರತುಪಡಿಸಿ ಇತರರಿಗೆ ಹಳೆಯ ನೋಟುಗಳ ವಿನಿಮಯಕ್ಕೆ ಅವಕಾಶವಿರುವುದಿಲ್ಲ ಎಂದರು. ತಮ್ಮ ಸ್ವಂತ ಗ್ರಾಹಕರ ಬಾಕಿಯುಳಿದಿರುವ ಕೆಲಸಗಳನ್ನು ಪೂರೈಸಲು ಬ್ಯಾಂಕುಗಳು ನಾಳೆಯ ದಿನವನ್ನು ಬಳಸಿಕೊಳ್ಳಲಿವೆ ಎಂದು ಅವರು ತಿಳಿಸಿದರು.

ನಾಳಿದ್ದು ರವಿವಾರ ಬ್ಯಾಂಕುಗಳಿಗೆ ರಜೆಯಿರುತ್ತದೆ ಎಂದರು.

ಮಮತಾ ಟೀಕೆ

ನೋಟುಗಳ ವಿನಿಮಯವನ್ನು ಒಂದು ದಿನದ ಮಟ್ಟಿಗೆ ನಿಲ್ಲಿಸಲಾಗಿದೆ. ಇದು ಇನ್ನೊಂದು ಯಡವಟ್ಟು ನಿರ್ಧಾರ. ಸರಕಾರವು ಈ ಬಗ್ಗೆ ವಿವರಣೆಯನ್ನು ನೀಡಬೇಕಾಗಿದೆ. ನೋಟುಗಳ ಕೊರತೆಯಿದೆಯೇ? ಇದು ಆರ್ಥಿಕ ತುರ್ತು ಪರಿಸ್ಥಿತಿ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News