ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರ ವಿರುದ್ಧ ಕೇಂದ್ರದ ವಾಗ್ದಾಳಿ

Update: 2016-11-20 03:58 GMT

ಹೊಸದಿಲ್ಲಿ, ನ.20: ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯನ್ನು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಈ ಮೂಲಕ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ನಡುವಿನ ಸಂಘರ್ಷ ತಾರಕಕ್ಕೇರಿದಂತಾಗಿದೆ.
ಈ ವರ್ಷ ಒಟ್ಟು 120 ಹೈಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. 1990ರ ದಶಕದಲ್ಲಿ ನ್ಯಾಯಾಂಗದ ಶಿಫಾರಸಿನಂತೆ ಸರಾಸರಿ 80 ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. 1990ರ ದಶಕದಲ್ಲಿ ಬಂದ ಎರಡು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನ್ಯಾಯಾಧೀಶರ ನೇಮಕಾತಿಯ ಅಧಿಕಾರವನ್ನು ವಾಪಸ್  ಪಡೆಯಲಾಗಿತ್ತು.
2013ರಲ್ಲಿ ಒಟ್ಟು 12 ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ. ಇದು 1990ರ ಬಳಿಕ ಅತ್ಯಧಿಕ. ಆದರೆ ಕೇಂದ್ರ ಸರ್ಕಾರ ಈ ವರ್ಷ ನವೆಂಬರ್ ಒಳಗಾಗಿ 120 ನ್ಯಾಯಾಧೀಶರನ್ನು ನೇಮಕ ಮಾಡಿದೆ. ಇದು ಗರಿಷ್ಠ ಸಂಖ್ಯೆಗಿಂತ ಒಂದು ಮಾತ್ರ ಕಡಿಮೆ. ಹಾಗಿದ್ದೂ ನೇಮಕಾತಿ ಬಗ್ಗೆ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ? ಎಂದು ಸಚಿವಾಲಯ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News