ತಿನ್ನಲು ಇಲ್ಲದ ಶಾರುಕ್ ಖಾನ್ !

Update: 2016-11-20 08:42 GMT

ಮುಂಬೈ, ನ. 20: ಸೂಪರ್ ಸ್ಟಾರ್, ಆಗರ್ಭ ಶ್ರೀಮಂತ ಶಾರುಕ್ ಖಾನ್ ಅವರಿಗೆ ತಿನ್ನಲಿಕ್ಕೆ ಇಲ್ಲದೆ ಹಸಿದಿದ್ದಾರೆಯೇ ? ನಂಬಲು ಅಸಾಧ್ಯವಾದರೂ ಇದು ನಿಜ. ಆದರೆ ಇದಕ್ಕೆ ಕಾರಣ ಮಾತ್ರ ಬೇರೆ.

ಶಾರುಕ್ ಖಾನ್ ಅತ್ಯಂತ ಕಠಿಣ ಪರಿಶ್ರಮಿ ಎನ್ನುವುದು ಅವರ ಜೊತೆ ಕೆಲಸ ಮಾಡಿರುವ ಎಲ್ಲ ನಟರು ಹಾಗೂ ನಿರ್ದೇಶಕರು ಹೇಳುವ ಮಾತು. ಇದೀಗ ಬಿಡುಗಡೆಯಾಗಲಿರುವ ಅವರ ಹೊಸ ಚಿತ್ರ ‘ಡಿಯರ್ ಜಿಂದಗಿ’ಯಲ್ಲಿ ಅವರ ಜೊತೆ  ಪ್ರಧಾನ ಪಾತ್ರದಲ್ಲಿರುವ ಆಲಿಯಾ ಭಟ್ ಶಾರುಖ್ ಕುರಿತ ಇನ್ನೊಂದು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಶಾರುಖ್ ಖಾನ್ ಕೆಲಸದಲ್ಲಿ ಮುಳುಗಿದರೆ ಆಹಾರ ತೆಗೆದುಕೊಳ್ಳುವುದನ್ನು ಸಂಪೂರ್ಣ ಮರೆತುಬಿಡುತ್ತಾರೆ. ಅವರಿಗೆ ಕಾಫಿಯೇ ಸದಾ ಸಂಗಾತಿ. ಇದರಿಂದ ಅವರ ಆರೋಗ್ಯ ಬಿಗಡಾಯಿಸಬಹುದು ಎಂದು ಆಲಿಯಾ ಆತಂಕ ವ್ಯಕ್ತ ಪಡಿಸಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ನಾವೇ ನೋಡಿ ಕೆಲವೊಮ್ಮೆ ಅವರಿಗೆ ಬಿಸ್ಕೆಟ್ ಗಳನ್ನು ಕೊಟ್ಟು ತಿನ್ನಲು ಒತ್ತಾಯ ಮಾಡುತ್ತಿದ್ದೆವು ಎಂದು ಆಲಿಯಾ ಹೇಳದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News