×
Ad

ವ್ಯಕ್ತಿಯ ದೇಹದಲ್ಲಿದ್ದ ಸೂಜಿಯನ್ನು 22 ವರ್ಷಗಳ ಬಳಿಕ ಹೊರತೆಗೆದರು

Update: 2016-11-20 15:11 IST

ತಿರುವನಂತಪುರ,ನ.20: ವ್ಯಕ್ತಿಯೋರ್ವ ತನ್ನ 12ರ ಹರೆಯದಲ್ಲಿ ಆಟವಾಡುತ್ತಿದ್ದಾಗ ಆತನ ದೇಹದಲ್ಲಿ ಸೇರಿಕೊಂಡಿದ್ದ ಸೂಜಿಯನ್ನು 22 ವರ್ಷಗಳ ಬಳಿಕ ವೈದ್ಯರು ಹೊರಕ್ಕೆ ತೆಗೆದಿದ್ದಾರೆ.

ಈಗ 34ರ ಹರೆಯದವನಾಗಿರುವ ಕಿರಣ ಕುಮಾರ್ ಎರಡು ವಾರಗಳ ಹಿಂದೆ ತನ್ನ ಪೃಷ್ಠದಲ್ಲಿ ಬಾವು ಮತ್ತು ವಿಪರೀತ ನೋವು ಎಂದು ದೂರಿಕೊಂಡು ಇಲ್ಲಿಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೆರಳಿದ್ದ.

ವೈದ್ಯರು ತಪಾಸಣೆ ನಡೆಸಿದಾಗ ಆತನ ಎಡಪೃಷ್ಠದೊಳಗೆ ಸೂಜಿಯೊಂದು ಪತ್ತೆಯಾಗಿತ್ತು. ಕುಮಾರ್ ಬಾಲಕನಾಗಿದ್ದಾಗ ಆಟವಾಡುತ್ತಿದ್ದ ಸಂದರ್ಭ ಸೂಜಿಯೊಂದು ಆಕಸ್ಮಿಕ ವಾಗಿ ದೇಹದಲ್ಲಿ ತೂರಿಕೊಂಡಿತ್ತು. ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಸೂಜಿಯನ್ನು ಪತ್ತೆ ಮಾಡಲು ವೈದ್ಯರಿಗೆ ಸಾಧ್ಯವಾಗಿರಲಿಲ್ಲ. ಬಳಿಕ ಆತನ ಹೆತ್ತವರೂ ಅದನ್ನು ಮರೆತುಬಿಟ್ಟಿದ್ದರು.

ಶನಿವಾರ ಆತನನ್ನು ಎರಡು ಗಂಟೆ ಕಾಲ ಸುದೀರ್ಘ ಶಸ್ತ್ರಚಿಕಿತ್ಸೆಗೆೆ ಒಳಪಡಿಸಿದ ವೈದ್ಯರು ಸೂಜಿಯನ್ನು ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಕುಮಾರ್ ಚೇತರಿಸಿಕೊಳ್ಳುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News