×
Ad

ಮೋಹನ್‌ಲಾಲ್ ಮತ್ತೆ ಸ್ಯಾಂಡಲ್‌ವುಡ್‌ಗೆ

Update: 2016-11-20 19:06 IST

ಒಪ್ಪಂ, ಪುಲಿಮುರುಗನ್ ಚಿತ್ರಗಳ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಮಲಯಾಳಂನ ಸೂಪರ್‌ಸ್ಟಾರ್ ಮೋಹನ್‌ಲಾಲ್ ಈಗ ಮತ್ತೊಮ್ಮೆ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದಾರೆ. ನಾಗಣ್ಣ ನಿರ್ದೇಶನದ ‘ಕಣ್ಣೇಶ್ವರ’ದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಉಪೇಂದ್ರ ಈ ಚಿತ್ರದ ಇನ್ನೋರ್ವ ನಾಯಕನಟ. ಬಹುಭಾಷಾ ನಟಿ ವೇದಿಕಾ ಈ ಚಿತ್ರಕ್ಕೆ ಹಿರೋಯಿನ್. ಕಣ್ಣೇಶ್ವರ ಚಿತ್ರವು ಕನ್ನಡವಲ್ಲದೆ ತಮಿಳು, ತೆಲುಗು ಭಾಷೆಗಳಲ್ಲಿಯೂ ಏಕಕಾಲದಲ್ಲಿ ಚಿತ್ರೀಕರಣಗೊಳ್ಳಲಿದೆ.

ಮೋಹನ್‌ಲಾಲ್ ಈ ಮೊದಲು ‘ಮೈತ್ರಿ’ ಕನ್ನಡ ಚಿತ್ರದಲ್ಲಿ ನಟಿಸಿದ್ದರು. ಪುನೀತ್ ಅಭಿನಯದ ಈ ಚಿತ್ರದಲ್ಲಿಯೂ ಮೋಹನ್‌ಲಾಲ್ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದರು. ಆದಾಗ್ಯೂ ಇದಕ್ಕೂ ಮುನ್ನ ಅವರು ರಾಜೇಂದ್ರಸಿಂಗ್ ಬಾಬು, ನಿರ್ದೇಶನದ ಲವ್ ಚಿತ್ರದಲ್ಲಿ ಅತಿಥಿ ನಟರಾಗಿ ಅಭಿನಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News